ಕರೊನಾ ಮುಕ್ತಿಗಾಗಿ ಅಮ್ಮನಿಗೆ ಪೂಜೆ

sirigere coorona Amma 17
Published on

ಸಿರಿಗೆರೆ: ಚಿತ್ರದುರ್ಗ ತಾಲೂಕು ಆಲಘಟ್ಟ ಗ್ರಾಮಸ್ಥರು ಭಾನುವಾರ ಊರಿಂದ ಹೊರಗೆ ಅಮ್ಮನನ್ನು ಕಳುಹಿಸುವ ಮೂಲಕ ಕರೊನಾ ಮುಕ್ತಿಗೆ ಪ್ರಾರ್ಥಿಸಿದರು.

ಪ್ರತಿ ಮನೆಯಲ್ಲಿ ಬೇವಿನ ಸೊಪ್ಪು ಇಟ್ಟು ಅಮ್ಮನನ್ನು ಪ್ರತಿಷ್ಠಾಪನೆ ಮಾಡಿ ಶ್ರದ್ಧೆಯಿಂದ ಪೂಜೆ ಸಲ್ಲಿಸಲಾಯಿತು. ಬಳಿಕ ಊರ ಮುಂದೆ ಎಲ್ಲ ಮನೆಗಳ ಅಮ್ಮನ ಮೂರ್ತಿಗಳನ್ನು ಸಂಗ್ರಹಿಸಿ ಸಂಜೆ ಊರಿನ ಗಡಿದಾಟಿಸಿ ಹಿಂದೆ ತಿರುಗಿ ನೋಡದಂತೆ ಮನೆಗೆ ಮರಳಿ ಬರಲಾಯಿತು. ಹೀಗೆ ಮಾಡುವುದರಿಂದ ಚಿಕೂನ್‌ಗುನ್ಯಾ, ಡೆಂೆ, ಮಲೇರಿಯಾ, ಕರೊನಾದಂತಹ ಮಹಾಮಾರಿ ಕಾಯಿಲೆಗಳು ತೊಲಗುತ್ತವೆ. ಜನ- ಜಾನುವಾರುಗಳ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net