ಚಿಕ್ಕಾಲಘಟ್ಟದಲ್ಲಿ ಧನುರ್ಮಾಸ ಪೂಜೆ

SIRIGERE CHIKKALAGATTA 16 (2)
Published on

ಸಿರಿಗೆರೆ: ಸಮೀಪದ ಚಿಕ್ಕಾಲಘಟ್ಟದಲ್ಲಿ ಕರಿಯಮ್ಮ ದೇವಿಗೆ ಧನುರ್ಮಾಸ ಪೂಜೆ ನೆರವೇರಿಸಲಾಯಿತು.

ಕರಿಯಮ್ಮ, ಆಂಜನೇಯಸ್ವಾಮಿ ಹಾಗೂ ಈಶ್ವರ ದೇಗುಲಗಳಲ್ಲಿ ಒಂದು ತಿಂಗಳಿನಿಂದ ಧನುರ್ಮಾಸದ ಅಂಗವಾಗಿ ಪ್ರತಿನಿತ್ಯ ಸೂರ್ಯೋದಯಕ್ಕೂ ಮುನ್ನ ಪೂಜಾಕೈಂಕರ್ಯಗಳು ನಡೆದವು.

ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಭಕ್ತರು, ಸಂಪ್ರದಾಯದಂತೆ ಅಂದು ರಾತ್ರಿ ದೇವಾಲಯದಲ್ಲಿಯೇ ತಂಗಿ, ಮುಂಜಜಾನೆ ಪೂಜೆ ಮುಗಿಸಿಕೊಂಡು ಮನೆಗೆ ಹಿಂದಿರುಗಿದರು.

ಕೊನೆಯ ದಿನವಾದ ಬುಧವಾರ ದೇವರಿಗೆ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net