ಜನಸ್ಪಂದನದಲ್ಲಿ ಸಮಸ್ಯೆಗಳಿಗೆ ಪರಿಹಾರ

Sirigere Alagatta 01
Published on

ಸಿರಿಗೆರೆ: ಸಮೀಪದ ಆಲಘಟ್ಟದ ಗ್ರಾಮದಲ್ಲಿ ಶನಿವಾರ ಜರುಗಿದ ತಾಲೂಕುಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಕುಡಿವ ನೀರಿನ ಸಮಸ್ಯೆ, ಸ್ವಚ್ಛತೆ ಸೇರಿ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಜನರ ಕುಂದುಕೊರತೆ ಆಲಿಸಿದ ಅಧಿಕಾರಿಗಳು, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ವಿವಿಧ ಇಲಾಖೆಗಳ ಲಭ್ಯವಿರುವ ಯೋಜನೆಗಳ ಕುರಿತು ವಿವರಿಸಿದ ಅಧಿಕಾರಿಗಳು, ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದರು.

ಚಿತ್ರದುರ್ಗ ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ತಾಪಂ ಇಒ ಕೃಷ್ಣನಾಯಕ್, ಹಿರೇಗುಂಟನೂರು ಹೋಬಳಿ ಉಪ ತಹಸೀಲ್ದಾರ್ ಪ್ರೇಮಲತಾ, ಆಲಘಟ್ಟ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ರಾಜಸ್ವ ನಿರೀಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net