ಮಂಡ್ಯದಲ್ಲಿ ಆ.28 ರಂದು ಸಿರಿಧಾನ್ಯ ಮೇಳ, ಬೆಲ್ಲದ ಪರಿಷೆ

siridhanya
Published on

ಬೆಂಗಳೂರು: ಮಂಡ್ಯದಲ್ಲಿ ಆ.28 ರಂದು ಸಿರಿಧಾನ್ಯ ಮೇಳ ಮತ್ತು ಬೆಲ್ಲದ ಪರಿಷೆ ನಡೆಯಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಆಹಾರ ಸಂಸ್ಕರಣಾ ಮಂತ್ರಾಲಯ, ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರ್ತು ನಿಗಮ, ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತಗಳಿಂದ ಈ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಿರಿಧಾನ್ಯ ಮೇಳ ವಸ್ತು ಪ್ರದರ್ಶನ ಮತ್ತು ಬೆಲ್ಲದ ಪರಿಷೆ ಹಾಗೂ ಆಹಾರ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಪ್ರಮುಖ ಆಕರ್ಷಣೆಗಳು

-ಪ್ರಗತಿಪರ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಕಿರು ಉದ್ದಿಮೆದಾರರು ಮತ್ತು ಸ್ವ ಸಹಾಯ ಸಂಘಗಳಿಗೆ ಕಿರು ಆಹಾರ ಉದ್ದಿಮೆ ಸ್ಥಾಪನೆ ಉತ್ತೇಜಿಸಲು ಸಿರಿಧಾನ್ಯ ಹಾಗೂ ಇತರೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಕುರಿತು ರಾಷ್ಟ್ರದ ಪ್ರತಿಷ್ಠಿತ ಆಹಾರ ಸಂಶೋಧನಾ ಸಂಸ್ಥೆಗಳಿಂದ ತಾಂತ್ರಿಕ ಮಾಹಿತಿ.

-ಕಿರು ಆಹಾರ ಸಂಸ್ಕರನಾ ಉದ್ದಿಮೆಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರೆಯುವ ಆರ್ಥಿಕ ಸೌಲಭ್ಯಗಳ ಕುರಿತ ಮಾಹಿತಿ.

-ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಕುರಿತು ಸಲಹೆ.

-ಪ್ರಥಮ ಬಾರಿಗೆ ಮಂಡ್ಯ ಬೆಲ್ಲದ ಪರಿಷೆ

-ಉತ್ಪಾದನೆಯಿಂದ ಉದ್ಯಮದೆಡೆತಗೆ ಶೀರ್ಷಿಕೆಯಡಿ ಉತ್ಪಾದಕರು-ಖರೀದಿದಾರರ ಸಂಪರ್ಕ.

-ಸಿರಿದಾನ್ಯ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net