‘ಸಿರಿ ಮಿಲ್ಲೆಟ್ ಕೆಫೆ’ ಧಾರವಾಡದಲ್ಲಿ ಶುಭಾರಂಭ

New Project (2)
Published on

ಬೆಳ್ತಂಗಡಿ: ಧಾರವಾಡ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ‘ಸಿರಿ ಮಿಲ್ಲೆಟ್ ಕೆಫೆ’ ಶುಕ್ರವಾರ ಶುಭಾರಂಭಗೊಂಡಿತು.

ಸಿರಿ ಸಂಸ್ಥೆ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕೆಫೆ ಉದ್ಘಾಟಿಸಿ, ಯುವಪೀಳಿಗೆಗೆ ಆರೋಗ್ಯಕರವಾಗಿ ಜೀವಿಸಲು ಅವಶ್ಯಕವಾಗಿರುವ ಪೌಷ್ಟಿಕಾಂಶಯುಕ್ತ ಆಹಾರೋತ್ಪನ್ನಗಳು ದೊರೆಯಬೇಕು ಎನ್ನುವ ಉದ್ದೇಶದಿಂದ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯನ್ನು ಎಸ್‌ಡಿಎಂ ಆಸ್ಪತ್ರೆ ಆವರಣದಲ್ಲಿ ತೆರೆಯಲಾಗಿದೆ. ಇಲ್ಲಿ ಮಧುಮೇಹ, ಬೊಜ್ಜು ನಿವಾರಕ, ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಸಿರಿಧಾನ್ಯ ಉತ್ಪನ್ನಗಳನ್ನು ಬಳಸಿ ಶುಚಿ- ರುಚಿಯಾದ ಆರೊಗ್ಯಕರವಾದ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುವ ದೃಷ್ಟಿಯಿಂದ ಸಿರಿ ಮಿಲ್ಲೆಟ್ ಕೆಫೆ ಆರಂಭಿಸಿದ್ದೇವೆ ಎಂದರು.

ಧಾರವಾಡ ಎಸ್‌ಡಿಎಂ ವಿಶ್ವವಿದ್ಯಾಲಯ ಕುಲಪತಿ ಡಾ.ನಿರಂಜನ್ ಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್ ದಂಪತಿ ಶುಭಹಾರೈಸಿದರು. ಧಾರವಾಡ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜೀವಂಧರ್ ಕುಮಾರ್, ಹಣಕಾಸು ನಿರ್ದೇಶಕ ವಿ.ಜಿ.ಪ್ರಭು, ಧಾರವಾಡ ಎಸ್‌ಡಿಎಂ ಡೆಂಟಲ್ ಹಾಸ್ಪಿಟಲಿಟಿ ಆರ್.ಒ ಶ್ರೀನಾಗ್ ಕುಮಾರ್, ರಾಯಪುರ ಸಿರಿಮಿಲ್ಲೆಟ್ ಘಟಕದ ಸಿ.ಸಿ.ಒ ಗಣೇಶ್ ಪ್ರಸಾದ್ ಎಸ್. ಮೊದಲಾದವರು ಉಪಸ್ಥಿತರಿದ್ದರು.

ಅತಿ ಕಡಿಮೆ ದರದಲ್ಲಿ ಲಭ್ಯ

ಸಿರಿ ಮಿಲ್ಲೆಟ್ ಕೆಫೆಯಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳಾದ ಮಿಲ್ಲೆಟ್ ಕುಕ್ಕೀಸ್, ಮಿಲ್ಲೆಟ್ ರಸ್ಕ್, ಡೋನಟ್, ರಿಬ್ಬನ್ಪಕೋಡಾ, ನವಣೆ ಲಡ್ಡು, ಬೆಳಗ್ಗಿನ ಉಪಹಾರಕ್ಕೆ ಯೋಗ್ಯವಾಗಿರುವ ಬರಗು ದೋಸೆ, ಮಿಲ್ಲೆಟ್ ಉಪ್ಮ, ಪೋಹ, ವರ್ಮಸಲ್ಲಿ, ಮಧ್ಯಾಹ್ನದ ಭೋಜನಕ್ಕೆ ಸಿರಿಧಾನ್ಯಗಳ ಬಿಸಿಬೇಳೆ ಬಾತ್, ತಾಳಿಪಟ್ಟು, ದಾಲ್‌ಕಿಚಡಿ, ಮಿಲ್ಲೆಟ್ ಮೊಸರನ್ನ, ಜೋಳರೋಟ್ಟಿ, ಸಂಜೆಗೆ ಸ್ನಾಕ್ಸ್ ಐಟಮ್‌ಗಳಾದ ನ್ಯೂಟ್ರಿಅಟ್ಟನಿಯನ್ ಪಕೋಡಾ, ವೆಜ್ ಸ್ಯಾಂಡ್ವಿಚ್, ಜೋಳವಡ ಇತ್ಯಾದಿ ಉತ್ತಮ ಗುಣಮಟ್ಟವುಳ್ಳ ಬಿಸಿಬಿಸಿ ಖಾದ್ಯಗಳು ಅತಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net