ಸಿರಿಧಾನ್ಯ ಮೇಳಕ್ಕೆ ಧನ್ಯತೆ ಭಾವ

26imam3-Web
ಬೆಳಗಾವಿಯ ಡಾ. ಎಸ್.ಜಿ. ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಸಾವಯವ, ಸಿರಿಧಾನ್ಯ ಮೇಳ ಮತ್ತು ಲ-ಪುಷ್ಪ ಪ್ರದರ್ಶನವನ್ನು ಸಚಿವ ಜಗದೀಶ ಶೆಟ್ಟರ್ ವೀಕ್ಷಿಸಿದರು. ಅಭಯ ಪಾಟೀಲ, ಅನಿಲ ಬೆನಕೆ, ಡಾ. ಎಸ್.ಬಿ.ಬೊಮ್ಮನಹಳ್ಳಿ ಇತರರಿದ್ದರು.
Published on

ಬೆಳಗಾವಿ: ಶಿವಬಸವ ನಗರದ ಡಾ. ಎಸ್.ಜಿ. ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಸಾವಯವ, ಸಿರಿಧಾನ್ಯ ಮೇಳ ಮತ್ತು ಲ-ಪುಷ್ಪ ಪ್ರದರ್ಶನ ಭಾನುವಾರ ತೆರೆ ಕಂಡಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಜಿಲ್ಲಾ ಕೃಷಿಕ ಸಮಾಜ, ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಜಿಲ್ಲಾ ತೋಟಗಾರಿಕಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮೇಳದಲ್ಲಿ 75 ಮಳಿಗೆ ತೆರೆಯಲಾಗಿತ್ತು.

ಸಮಗ್ರ ಮಾಹಿತಿ: ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಕವಿತಾ ಸಿ., ಡಾ. ಉಮಾ ಕುಲಕರ್ಣಿ, ಪ್ರೊ. ಅಶೋಕ ಬೈಲವಾಡ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಸಾವಯವ ಕೃಷಿ ಅಗತ್ಯತೆ ಬಗ್ಗೆ ವಿವರಿಸಿದರು. ರೈತರ ಹತ್ತು-ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಸಿರಿಧಾನ್ಯ ಸೇವನೆಯಿಂದ ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು ಎಂಬುದನ್ನು ಮನದಟ್ಟು ಮಾಡಿದರು. ‘ಆಹಾರವೇ ಔಷಧ. ಸಿರಿಧಾನ್ಯವೇ ಆಹಾರ’ ಎನ್ನುವ ಸಂದೇಶ ಸಾರಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಉಪನಿರ್ದೇಶಕ ಡಾ. ಎಚ್.ಡಿ. ಕೋಳೇಕರ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ಅಶೋಕ ತುಬಚಿ ಇತರರಿದ್ದರು.


ಖರೀದಿಯೂ ಬಲು ಜೋರು

ರಾಜ್ಯದ ವಿವಿಧೆಡೆಯಿಂದ ಭಾನುವಾರ ಸಾವಯವ, ಸಿರಿಧಾನ್ಯ ಮೇಳ ವೀಕ್ಷಿಸಲು ಬಂದಿದ್ದ ಸಾವಿರಾರು ಜನರು ಸಿರಿಧಾನ್ಯ ಬೀಜಗಳು, ಸಾವಯವ ಬೆಲ್ಲ, ಔಷೀಯ ಸಸ್ಯ, ಕರಕುಶಲ ವಸ್ತುಗಳು ಮತ್ತು ಕೃಷಿ ಯಂತ್ರೋಪಕರಣ ಖರೀದಿಸಿದರು. ಸಿರಿಧಾನ್ಯದಿಂದ ತಯಾರಿಸಿದ ಪಾನೀಯ ಸೇವಿಸಿ ಬಾಯಾರಿಕೆ ನೀಗಿಸಿಕೊಂಡರು. ಜಾನುವಾರು ಪ್ರದರ್ಶನ ರೈತರನ್ನು ಆಕರ್ಷಿಸಿತು. ಯುವಕ-ಯುವತಿಯರು ಅಲಂಕಾರಿಕ ಪುಷ್ಪಗಳ ಕಲಾಕೃತಿ ಎದುರು ಸೆಲಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net