ದುಶ್ಚಟಗಳಿಂದ ಮುಕ್ತಿಗೆ ಮಾಲೆ ಧಾರಣೆ

Untitled design(13)
Published on

ಸಿರವಾರ: ಯುವಾ ಬ್ರಿಗೇಡ್ ತಂಡದಿಂದ ರಾಕ್ ಡೇ ಅಂಗವಾಗಿ ತಾಲೂಕಿನ ನವಲಕಲ್ ಬೃಹನ್ಮಠದಲ್ಲಿ ವಿವೇಕ ಮಾಲೆಯನ್ನು ಧಾರಣೆ ನಡೆಯಿತು.

ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಡಿ.25 ರಿಂದ ಜ.12ವರೆಗೆ ಮಾಲೆ ಧಾರಣೆ ನಡೆಯಲಿದೆ. ನಿತ್ಯ ಯೋಗ, ಭಜನೆ, ಸತ್ಸಂಗ ಮಾಡುವುದರ ಮೂಲಕ ಇತರರಿಗೆ ಸ್ಫೂರ್ತಿಯಾಗಲಿದೆ. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಾ ಬ್ರಿಗೇಡ್ ತಂಡವನ್ನ ಮಾರ್ಗದರ್ಶನ ಮಾಡುವ ಚಕ್ರವರ್ತಿ ಸೂಲಿಬೆಲೆ ಉತ್ತಮ ಮಾರ್ಗದಕಡೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ಮಾಲೆಯನ್ನು ಪ್ರತಿಯೊಬ್ಬ ಯುವಕರು ಹಾಕುವುದರಿಂದ ದುಶ್ಚಟಗಳಿಂದ ಮುಕ್ತಿ ಮಾಡಲಿದೆ ಎಂದರು. 15ಕ್ಕೂ ಹೆಚ್ಚು ಯುವಕರು ವಿವೇಕ ಮಾಲೆ ಧರಿಸಿದರು.

ಪ್ರಮುಖರಾದ ನರಸಿಂಹರಾವ್ ಕುಲಕರ್ಣಿ, ಸಿದ್ದಾರಮೇಶ ಪತ್ತಾರ್, ಕೆ.ಶ್ರೀನಿವಾಸ ಬಸಾಪೂರ, ಮಹಾಂತೇಶ ನಾಗಡದಿನ್ನಿ ಮಠ, ಪಿ.ಗಣೇಶ, ಕೆ.ಅಯ್ಯನಗೌಡ ಮಾಪಾ, ಆಕಾಶ ಹಿರೇಮಠ, ಪವನ ಪತ್ತಾರ, ವಸಂತ ಕುಮಾರ ಹಿರೇಮಠ, ಧರ್ಮತೇಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net