ವೀರ ಮದಕರಿ ನಾಯಕ ಜಯಂತಿ ಆಚರಣೆ

131020 Sirwar Madakari Nayaka Jayanti
ಸಿರವಾರದಲ್ಲಿ ಮಂಗಳವಾರ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕು ಘಟಕದಿಂದ ರಾಜಾವೀರ ಮದಕರಿ ನಾಯಕ ಜಯಂತಿ ಆಚರಿಸಲಾಯಿತು.
Published on

ಸಿರವಾರ: ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕು ಘಟಕದಿಂದ ಚಿತ್ರದುರ್ಗ ಅರಸ ರಾಜಾ ವೀರ ಮದಕರಿ ನಾಯಕ ಜಯಂತಿ ಮಂಗಳವಾರ ಆಚರಿಸಲಾಯಿತು.

ಜಯಂತಿ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ವೀರ ಮದಕರಿ ನಾಯಕ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಪಪಂ ಸದಸ್ಯ ಚಿನ್ನಾನ್ ನಾಗರಾಜ ಮಾತನಾಡಿ, ಜೀವನವಿಡೀ ಸಮಾಜದ ಏಳಿಗೆಗಾಗಿ ರಾಜ್ಯಭಾರ ಮಾಡಿದ ವೀರ ಮದಕರಿ ನಾಯಕ ಅವರಂತಹ ಮಹನೀಯರ ಸಾಹಸಗಳನ್ನು ತಿಳಿಯುವ ಜತೆಗೆ ಸಮಾಜಮುಖಿ ಕೆಲಸಗಳನ್ನು ಮಾಡೋಣ ಎಂದರು.

ಬಸವದೀಪ್ ನಾಯಕ ಲಕ್ಕಂದಿನ್ನಿ, ರಂಗನಾಥ ನಾಯಕ ಸೂರಿ ಹುಸೇನಪ್ಪ, ಶರಣಪ್ಪ ನಾಯಕ, ವೆಂಕಟೇಶ ದೊರೆ, ಸುನೀಲ, ಭೀಮೇಶ, ಯಲ್ಲಪ್ಪ ದೊರೆ, ಡಿ.ಯಮನೂರು, ಮಲ್ಲಿಕಾರ್ಜುನ, ಅಂಬು ನಾಯಕ, ಗುಜ್ಜಲ ಗೋಪಾಲ ನಾಯಕ, ನಾಗರಾಜ ನಾಯಕ, ಗೋಪಾಲಕೃಷ್ಣ, ಸಾದುರಂಗಯ್ಯ ಗುಜ್ಜಲ ಬಸವ, ಕೆ.ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net