

ಸಿರವಾರ: 3 ಲಕ್ಷಕ್ಕೂ ಅಧಿಕ ವಚನ ಬರೆದು, ಶರಣ ಸಂಸ್ಕೃತಿ ಮೈಗೂಡಿಸಿಕೊಂಡು, ಸಮುದಾಯದ ತಳಮಟ್ಟದ ಜನರ ಮೇಲೆತ್ತಲು ಜೀವನ ಮುಡುಪಾಗಿಟ್ಟಿದ್ದ ಮಹಾ ಮಹಿಮ ಮಡಿವಾಳ ಮಾಚಿದೇವರು ಎಂದು ಮಡಿವಾಳ ಸಮುದಾಯದ ತಾಲೂಕು ಅಧ್ಯಕ್ಷ ಹುಚ್ಚಪ್ಪ ಸೈದಾಪುರ ಹೇಳಿದರು. ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಇದಕ್ಕೂ ಮುನ್ನ ಸಮುದಾಯದವರಿಂದ ಮಾಚಿದೇವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಲಾಯಿತು. ಸಮುದಾಯದ ಪ್ರಮುಖರಾದ ರಾಜ, ರಘು, ಮಲ್ಲೇಶ, ಉದಯ, ಆನಂದ ಇತರರು ಇದ್ದರು.
ಪಪಂ ಕಚೇರಿಯಲ್ಲಿ: ತಾಲೂಕಿನ ಪಪಂ ಕಚೇರಿಯಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ ಮಾಲಾರ್ಪಾಣೆ ಮಾಡಿದರು. ಸದಸ್ಯರಾದ ನಾಗರಾಜ ಚಿನ್ನಾನ್, ಇರ್ಫಾನ್ ಬಡೇಗರ್, ಕಾಶಿಂ ಮೋತಿ, ಮಡಿವಾಳ ಸಮುದಾಯದ ಅಧ್ಯಕ್ಷ ಹುಚ್ಚಪ್ಪ ಸೈದಾಪೂರ, ಮುಖಂಡರಾದ ಗುರುನಾಥರೆಡ್ಡಿ, ಡಿ.ಯಮನೂರು, ಮಲ್ಲಪ್ಪ, ಹುಲಿಗೆಪ್ಪ, ಬಸವರಾಜ ನಾಗಡದಿನ್ನಿ, ಹುಲಿಗೆಪ್ಪ, ನಾಗಪ್ಪ ಮಡಿವಾಳ , ಪ್ರಕಾಶ ಇತರರು ಇದ್ದರು.