

ಸಿರವಾರ: ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಅಂಜುಮನ್ ಕಮಿಟಿ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು. ಕಾರ್ಯಕ್ರಮ ಕುರಿತು ಅಂಜುಮನ್ ಕಮಿಟಿ ಅಧ್ಯಕ್ಷ ಮಹಮ್ಮದ್ ವಲೀ ಗುತ್ತಿಗೆದಾರ ಮಾತನಾಡಿ, ಪ್ರತಿ ವರ್ಷ ಈದ್ ಮಿಲಾದ್ ಸಾರ್ವಜನಿಕರ ಮೆರವಣಿಗೆ ಮಾಡಲಾಗುತ್ತಿತ್ತು. ಕರೊನಾ ಕಾರಣದಿಂದ ಮೆರವಣಿಗೆ ಅವಕಾಶ ಇಲ್ಲ. ಇನ್ನು ಕರೊನಾ ಕಾರಣ ಎಲ್ಲಾ ಕಡೆ ರಕ್ತದ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರಕ್ತ ದಾನ ಮೂಲಕ ಈದ್ ಮಿಲಾದ್ ಹಬ್ಬವನ್ನು ಅರ್ಥಪೂರ್ಣಗೊಳಿಸಲಾಗುತ್ತಿದೆ ಎಂದರು.
ಕಮಿಟಿ ಉಪಾಧ್ಯಕ್ಷ ಹಸೇನ್ ಅಲೀ ಸಾಬ್, ಮಹಿಬೂಬ್ ಸಾಬ್ ಬಡೇಗರ್, ಸತ್ತಾರ್‌ಸಾಬ್ ಗುತ್ತಿಗೆದಾರ, ಹಾಜಿ ಚೌದ್ರಿ, ಇಂಬ್ರಾಹ್ಮಿ ಇದ್ದರು. ಡಾ.ಗುರುರಾಜ್, ಡಾ.ಅದಿತಿ, ಡಾ.ಸುನೀಲ್ ಸರೋದೆ, ಶಿವನಗೌಡ, ಭೀಮಾಶಂಕರ, ವೀರೇಶ, ನಾಗೇಂದ್ರ ಸೇರಿದಂತೆ ಸಿಬ್ಬಂದಿ ಇದ್ದರು. 100ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.