ತುಂಗಭದ್ರಾ ಕಾಲುವೆ ಕೆಳಭಾಗಕ್ಕೆ ಸಮರ್ಪಕ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

02112020 Sirwar Formars protest
Published on

ಸಿರವಾರ: ಜಕ್ಕಲದಿನ್ನಿ, ಗಣದಿನ್ನಿ, ಭಾಗ್ಯನಗರ ಸೇರಿದಂತೆ ಕೆಳಭಾಗಕ್ಕೆ ತುಂಗಭದ್ರಾ ಕಾಲುವೆ ನೀರು ಸಮರ್ಪಕ ಹರಿಸುವಂತೆ ಒತ್ತಾಯಿಸಿ ನೀರಾವರಿ ಕಚೇರಿ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಉತ್ತಮವಾಗಿ ಮುಂಗಾರು ಸುರಿದಿದ್ದು, ನದಿಗಳಲ್ಲಿ ನೀರು ಹರಿಯುತ್ತಿದೆ. ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದೆ. ಆದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ತಾತ್ಸಾರದಿಂದ ಜಕ್ಕಲದಿನ್ನಿ, ಗಣದಿನ್ನಿ, ಭಾಗ್ಯನಗರ, ಶಾಖಾಪೂರು ಭಾಗಕ್ಕೆ ಸರಿಯಾಗಿ ನೀರು ಹರಿಸದ ಕಾರಣ ಹತ್ತಿ, ಮೆಣಸಿನಕಾಯಿ ಬೆಳೆ ಬಾಡುತ್ತಿವೆ ಎಂದು ಅವಲತ್ತುಕೊಂಡರು.

ಕಚೇರಿಯಲ್ಲಿ ಜೆಇ ಮಲ್ಲಿಕಾರ್ಜುನ ಅವರ ಜತೆ ಹಿರಿಯ ಅಧಿಕಾರಿಗಳು ದೂರವಾಣಿ ಮುಖಾಂತರ ಮಾತನಾಡಿ ಮೂರು ದಿನಗಳಲ್ಲಿ ಸಮರ್ಪಕನೀರು ಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು. ರೈತರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಶರಣಗೌಡ ಬೆಳವಿನೂರು, ಹಣಮಣ್ಣ ಬಂಗಿ, ವೀರಪ್ಪ ನಾಯಕ, ದೇವರಾಜ, ಜಯರಾಜ್, ಹುಸೇನ್ ಸಾಬ್, ಜಯರಾಜ್ ಮಾಲಿಪಾಟೀಲ್, ನಾಗಪ್ಪ, ಮಹದೇವಪ್ಪ, ಮಲ್ಲಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net