

ಸಿರವಾರ: ಕೂಲಿ ಕಾರ್ಮಿಕರು, ಪ್ರಯಾಣಿಕರನ್ನು ಟಾಟಾ ಏಸ್, ಕ್ರೂಷರ್‌ಗಳ ಟಾಪ್ ಮೇಲೆ ಕೂರಿಸಿಕೊಂಡುವ ಹೋಗುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಹಾಗೂ ಪರವಾನಗಿ ರದ್ದು ಮಾಡಲಾಗುವುದೆಂದು ಸಿಂಧನೂರು ಡಿವೈಎಸ್ಪಿ ವೆಂಕಟಪ್ಪ ನಾಯಕ ಹೇಳಿದರು. ಪಟ್ಟಣದಲ್ಲಿ ಬುಧವಾರ ವಾಹನಗಳನ್ನು ತಪಾಸಣೆ ಮಾಡಿದ ಅವರು, ಪ್ರಯಾಣಿಕರನ್ನು ವಾಹನಗಳ ಟಾಪ್ ಮೇಲೆ ಕೂರಿಸಿ ಚಾಲನೆ ಮಾಡುವುದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು. ಪಟ್ಟಣದಲ್ಲಿ ಒಟ್ಟು 30 ಟಾಟಾ ಎಸ್, 10 ಕ್ರೂಷರ್ ವಾಹನಗಳ ಮೇಲಿರುವ ಕ್ಯಾರಿಯರ್, ಕಟ್ಟಿಗೆ ಹಲಗೆ ತೆರವು ಮಾಡಲಾಯಿತು. ಸಿಪಿಐ ಶಶಿಕಾಂತ, ಪಿಎಸ್‌ಐ ಗೀತಾಂಜಲಿ ಇದ್ದರು.