

ಸಿರವಾರ: ಪಟ್ಟಣದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ತಹಸೀಲ್ದಾರ್ ವಿಜಯೇಂದ್ರ ಎಸ್.ಹುಲಿನಾಯಕ ಶನಿವಾರ ಚಾಲನೆ ನೀಡಿದರು.
ರೈತರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ ಜಾರಿಗೊಳಿಸಿದೆ. ಪಹಣಿ, ಜಾತಿ-ಆದಾಯ ಪ್ರಮಾಣ ಪತ್ರ, ನಕಾಶೆ ಹಾಗೂ ಭೂದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ಇಲಾಖೆ ಅಧಿಕಾರಿಗಳು ತಲುಪಿಸಲಿದ್ದಾರೆ. ದಾಖಲಾತಿಗಳಲ್ಲಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದರು. ಗ್ರೇಡ್-2 ತಹಸೀಲ್ದಾರ್ ಪರಶುರಾಮ, ಉಪ ತಹಸೀಲ್ದಾರ್ ಸಿದ್ದನಗೌಡ, ಕಂದಾಯ ನಿರೀಕ್ಷಕ ಶ್ರೀನಾಥ, ಪಪಂ ಸದಸ್ಯರಾದ ಸಂದೀಪ ಪಾಟೀಲ್, ಕೃಷ್ಣನಾಯಕ, ಗ್ರಾಮಲೆಕ್ಕಾಧಿಕಾರಿ ವಿಲ್ಸನ್, ಅಮರೇಶ ವಾಲೇಕರ್ ಇದ್ದರು.