ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಿ

26112022 sirwar prize distribution
Published on

ಕಸಾಪ ಜಿಲ್ಲಾ ಕಾರ್ಯದರ್ಶಿ ತಾಯಪ್ಪ ಹೊಸೂರು ಸಲಹೆ

ಸಿರವಾರ: ರಾಜ್ಯೋತ್ಸವದ ಅಂಗವಾಗಿ ಪಟ್ಟಣದಲ್ಲಿ ಕಸಾಪ ತಾಲೂಕು ಘಟಕದಿಂದ ಏರ್ಪಡಿಸಿದ್ದ ನಾಡು, ನುಡಿ ಪ್ರಬಂಧ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಮತ್ತು ಹಾಸ್ಯ ಕಾರ್ಯಕ್ರಮ ಶುಕ್ರವಾರ ಆಯೋಜಿಸಲಾಗಿತ್ತು. ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ತಾಯಪ್ಪ ಹೊಸೂರು ಉದ್ಘಾಟಿಸಿದರು.

ಪ್ರತಿಯೊಬ್ಬರೂ ಭಾಷಾಭಿಮಾನ ಬೆಳಸಿಕೊಳ್ಳಬೇಕು. ಮಕ್ಕಳಲ್ಲಿ ಶಾಲೆಯಿಂದಲೇ ಸಾಹಿತ್ಯದ ಅಭಿರುಚಿ ಬೆಳಸಬೇಕು. ಕನ್ನಡ ಎಂದಿಗೂ ಅಳಿಯದ ಭಾಷೆಯಾಗಿದೆ ಎಂದರು. ಕನ್ನಡ ಭಾಷೆ ವೈಶಿಷ್ಟ್ಯದ ಬಗ್ಗೆ ಲಕ್ಷಣ ಬಾದಾಮಿ ಉಪನ್ಯಾಸ ನೀಡಿದರು. ಕಲಾವಿದ ದೇವರಾಜ ಎಲಿ ಗಬ್ಬೂರು ಹಾಸ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಪ್ರಮುಖರಾದ ಚುಕ್ಕಿ ಸೂಗಪ್ಪ, ಮೌನೇಶ ಹಿರೇಹಣಗಿ, ಗಲಗ ಸೂಗುರೇಶ, ಟಿ.ಬಸವರಾಜ, ಪ್ರಕಾಶ ಪಾಟೀಲ್, ಅಮರೇಶ ದಿನ್ನಿ, ಸುರೇಶ ಹೀರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net