21 ರಂದು ಸಿರವಾರ ಸಿರಿ ಕನ್ನಡ ಉತ್ಸವ

Raghavendra Khajanagouda
ರಾಘವೇಂದ್ರ ಖಾಜನಗೌಡ
Published on

ಸಿರವಾರ: ಕರ್ನಾಟಕ ರಕ್ಷಣಾ ವೇದಿಕೆಯಿಂದ (ಪವೀಣ್ ಕುಮಾರ ಶೆಟ್ಟಿ) 7ನೇ ವರ್ಷದ ಸಿರವಾರ ಸಿರಿ ಕನ್ನಡ ಉತ್ಸವ ಕಾರ್ಯಕ್ರಮವನ್ನು ನ.21 ರಂದು ಚುಕ್ಕಿ ರುದ್ರಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ತಾಲೂಕು ಅಧ್ಯಕ್ಷ ರಾಘವೇಂದ್ರ ಖಾಜನಗೌಡ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೀರಾವರಿ ಕಚೇರಿಯಿಂದ ತಾಯಿ ಭುವನೇಶ್ವರಿ ಹಾಗೂ ಚಿತ್ರನಟರಾದ ವಿಷ್ಣುವರ್ಧನ್, ಅಂಬರೀಶ, ಶಂಕರನಾಗ್ ಹಾಗೂ ಪುನೀತ್ ರಾಜಕುಮಾರ್ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಉತ್ತರ ಕರ್ನಾಟಕ ಅಧ್ಯಕ್ಷ ಶರಣು.ಬಿ.ಗದ್ದುಗೆ ಆಗಮಿಸಲಿದ್ದಾರೆ. ಕೋವಿಡ್ ಸಮಯದಲ್ಲಿ ತಾಲೂಕಿನಲ್ಲಿ ಕಾರ್ಯನಿರ್ವಹಿಸಿದವರು ಹಾಗೂ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು. ನಂತರ ಪ್ರಜ್ವಲ್ ಡ್ಯಾನ್ಸ್ ಅಕಾಡೆಮಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಮಾನವಿ ತಾಲೂಕು ಅಧ್ಯಕ್ಷ ಸುಬಾನ್ ಬೇಗ್, ಯಂಕಪ್ಪ ಗುಜ್ಜಲ್, ವೆಂಕಟೇಶ್ ಶಂಕ್ರಿ, ಅಮರನಾಥ, ಅಲಂಪಾಷ, ಮಾಳಿಂಗರಾಯ ಲಕ್ಕಂದಿನ್ನಿ, ಶರಣಬಸವ ನಾಯಕ, ಮಲ್ಲಿಕಾರ್ಜುನ ಮಲ್ಲಟ, ಶಾಂತಕುಮಾರ ಕಲ್ಲೂರು, ಸಲೀಮ್ ಮಾನವಿ, ನಾಗೇಶ್ ನವಲಕಲ್, ರವಿಕುಮಾರ್ ಮಲ್ಲಟ, ಸಬ್ಜಲಿಸಾಬ್ ಭಾಗ್ಯನಗರ, ಬಸವರಾಜ ಬಾಗಲವಾಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net