ದೀಪ ಬೆಳಗುವುದರಿಂದ ಕಲ್ಮಶ ದೂರ; ಗದ್ದುಗೆ ಮಠದ ಮರಿದೇವರು ಚನ್ನವೀರೇಶ್ವರ ಸ್ವಾಮೀಜಿ ಅನಿಸಿಕೆ

25112022 sirwar karthika mahostava
Published on

ಸಿರವಾರ: ದೀಪ ಬೆಳಗಿಸುವುದರಿಂದ ನಮ್ಮ ಸುತ್ತಮುತ್ತಲಿನ ಕಲ್ಮಶಗಳು ದೂರವಾಗುತ್ತವೆ ಎಂದು ಗದ್ದುಗೆ ಮಠದ ಮರಿದೇವರು ಚನ್ನವೀರೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಈಶ್ವರ ದೇವಸ್ಥಾನ ಮತ್ತು ಗದ್ದುಗೆ ಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ದೀಪೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಜೀವನದಲ್ಲಿ ಅಜ್ಞಾನವೆಂಬ ಅಂಧಕಾರವನ್ನು ಅಳಿಸಿ ಜ್ಞಾನವೆಂಬ ಬೆಳಕನ್ನು ನೀಡುವುದೇ ದೀಪೋತ್ಸವ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೀಪ ಬೆಳಗುವುದರಿಂದ ನಮ್ಮ ಅಜ್ಞಾನ ಕಳೆದು ಜ್ಞಾನ ಬೆಳಗುತ್ತದೆ. ಆಧುನಿಕತೆಯಿಂದಾಗಿ ನಮ್ಮ ಆಚಾರ, ವಿಚಾರ, ಸಂಸ್ಕಾರಗಳನ್ನು ಜನರು ಮರೆಯುತ್ತಿದ್ದಾರೆ ಎಂದು ಹೇಳಿದರು.

ಬೆಳಗ್ಗೆಯಿಂದ ಚನ್ನವೀರೇಶ್ವರ ಸ್ವಾಮಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಹೂವಿನ ಅಲಂಕಾರ, ವಸ್ತ್ರಾಲಂಕಾರ ಮಾಡಲಾಗಿತ್ತು. ಪಲ್ಲಕ್ಕಿ ಸೇವೆ, ನಂದಿಕೋಲು ಕುಣಿತ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net