ಮಂದಿರ ಉದ್ಘಾಟನೆ ಹಬ್ಬದಂತೆ ಆಚರಿಸಿ

Sirwar kallur news
ಸಿರವಾರ ತಾಲೂಕಿನ ಕಲ್ಲೂರಿನಲ್ಲಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರ ಹಾಗೂ ಕರಪತ್ರ ವಿತರಣೆ ಮಾಡಲಾಯಿತು. ಸ್ಥಳೀಯ ಶಂಕರಾನಂದ ಮಠದ ಶಿವಾನಂದ ಭಾರತಿ ಸ್ವಾಮೀಜಿ, ಬೆಳಗಾವಿ ಜಿಲ್ಲೆ ಚೊಂಚನಕಟ್ಟಿ ಯೋಗಿ ಸಿದ್ದೇಶ್ವರ ಆಶ್ರಮದ ಬೆಳೆಯಾನಂದ ಸಿದ್ದ ಶ್ರೀಗಳು, ಗೋಕಾಕ ಶಂಕರಾನಂದ ಸ್ವಾಮೀಜಿ, ಆರ್‌ಎಸ್‌ಎಸ್ ಮಾನ್ವಿ ತಾಲೂಕು ಪ್ರಮುಖ್ ಮಹಾದೇವ ಬೊಮ್ಮನಾಳ ಇತರರಿದ್ದರು.
Published on


ಶಿವಾನಂದ ಭಾರತಿ ಸ್ವಾಮೀಜಿ ಕರೆ ಕಲ್ಲೂರಿನಲ್ಲಿ ಮಂತ್ರಾಕ್ಷತೆ, ಆಮಂತ್ರಣ ವಿತರಣೆ

ಸಿರವಾರ: ಕಲ್ಲೂರಿನ ದತ್ತಾತ್ರೇಯ ಆಶ್ರಮದಲ್ಲಿ ಭಾನುವಾರ ಅಯೋಧ್ಯೆಯ ಮಂತ್ರಾಕ್ಷತೆ, ಶ್ರೀರಾಮ ಮಂದಿರದ ಭಾವಚಿತ್ರ ಹಾಗೂ ಕರಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಶಂಕರಾನಂದ ಮಠದ ಶಿವಾನಂದ ಭಾರತಿ ಸ್ವಾಮೀಜಿ, ಬೆಳಗಾವಿ ಜಿಲ್ಲೆ ಚೊಂಚನಕಟ್ಟಿ ಯೋಗಿ ಸಿದ್ದೇಶ್ವರ ಆಶ್ರಮದ ಬೆಳೆಯಾನಂದ ಸಿದ್ದ ಶ್ರೀಗಳು, ಗೋಕಾಕ ಶಂಕರಾನಂದ ಸ್ವಾಮೀಜಿ ಚಾಲನೆ ನೀಡಿದರು.

ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ದೇಶಾದ್ಯಂತ ಜ.15 ರವರೆಗೆ ಶ್ರೀರಾಮ ಮಂದಿರ ಮಹಾ ಸಂಪರ್ಕ ಅಭಿಯಾನ ನಡೆದಿದೆ. 500 ವರ್ಷಗಳ ಸತತ ಸಂಘರ್ಷದ ಫಲವಾಗಿ, ಭಾರತೀಯರೆಲ್ಲ ಶ್ರದ್ಧೆ-ಭಕ್ತಿಯಿಂದ ಕಾಯುತ್ತಿರುವ ಭವ್ಯವಾದ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ನಮ್ಮೆಲ್ಲರ ಭಾಗ್ಯವೇ ಸರಿ ಎಂದರು.

ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಕರಪತ್ರ ಹಾಗೂ ಶ್ರೀರಾಮನ ಭಾವಚಿತ್ರ ದೇಶದ ಪ್ರತಿಯೊಬ್ಬರ ಮನೆ ಮುಟ್ಟಬೇಕು ಎಂಬ ಉದ್ದೇಶದಿಂದ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದೇಶದ ಹಿಂದುಗಳು ಜ.22 ರಂದು ಹಬ್ಬ ಆಚರಣೆ ಮಾಡಬೇಕು ಎಂದು ಶಿವಾನಂದ ಭಾರತಿ ಸ್ವಾಮೀಜಿ ಕರೆ ನೀಡಿದರು.

ಪ್ರಮುಖರಾದ ಬಸವರಾಜ ಕೆ.ಬೊಮ್ಮನಾಳ, ಆದೆಪ್ಪ ಗೌಡ ಕುರ್ಡಿ, ರಮೇಶ ಹೂಗಾರ್ ಅರೋಲಿ, ನರಸಪ್ಪ ಕುರ್ಡಿ, ಶಿವಕುಮಾರ ಕಲ್ಲೂರು, ಜೆ ಮಲ್ಲಿಕಾರ್ಜುನ ಕಲ್ಲೂರು, ಹನುಮೇಶ ಕಂಬಳನತ್ತಿ, ವೆಂಕಟೇಶ ಸಂಕೇಶ್ವರ, ಗುರುಬಸವ ಬೊಮ್ಮನಾಳ, ಕ್ಷೀರಲಿಂಗ, ಲಕ್ಷ್ಮೀಕಾಂತ, ಹನುಮೇಶ ಕಡದೊಡ್ಡಿ ಬೊಮ್ಮನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net