ಯುವಕರು ಮೊಬೈಲ್ ಗೀಳಿನಿಂದ ಹೊರಬನ್ನಿ; ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಲಹೆ

11 Sirwar 1
ಸಿರವಾರದಲ್ಲಿ ಪಟ್ಟಣದಲ್ಲಿ ಸಿರವಾರ ಪ್ರೀಮಿಯರ್ ಲೀಗ್ ಸೀಸನ್-5 ಕ್ರಿಕೆಟ್ ಟೂರ್ನಾಮೆಂಟ್‌ಗೆ ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಪಟ್ಟಣ ಪಂಚಾಯತಿ ಸದಸ್ಯ ಸೂರಿ ದುರಗಣ್ಣ ನಾಯಕ, ಪ್ರಮುಖರಾದ ಸಂದೀಪ್ ಪಾಟೀಲ್, ಜೆ.ದೇವರಾಜಗೌಡ, ರಮೇಶ ದರ್ಶನಕರ್, ಗಡ್ಲ್ ಚನ್ನಬಸವ, ಮಂಜುನಾಥ ಸಾಹುಕಾರ್, ಜೆಸ್ಕಾಂ ಜೆಇ ಶಿವಮೂರ್ತಿ, ಪಂಪಣ್ಣಗೌಡ ಇದ್ದರು.
Published on

ಸಿರವಾರ: ಕ್ರೀಡೆಯಲ್ಲಿ ಸೋಲು-ಗೆಲುವು ಸಮನಾಗಿ ತೆಗೆದುಕೊಳ್ಳಬೇಕು ಎಂದು ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಪಟ್ಟಣದಲ್ಲಿ ಶನಿವಾರ ಸಿರವಾರ ಪ್ರೀಮಿಯರ್ ಲೀಗ್ ಸೀಸನ್-5 ಕ್ರಿಕೆಟ್ ಟೂರ್ನಾಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು. ಮೊಬೈಲ್ ಗೀಳಿನಿಂದ ಯುವಕರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕ್ರೀಡೆಯಿಂದ ದೈಹಿಕ ಸಧೃಡ ಜತೆಗೆ ಮಾನಸಿಕ ನೆಮ್ಮದಿ ಸಿಗಲಿದೆ ಎಂದರು.


ಪಟ್ಟಣ ಪಂಚಾಯತಿ ಸದಸ್ಯ ಸೂರಿ ದುರಗಣ್ಣ ನಾಯಕ, ಪ್ರಮುಖರಾದ ಸಂದೀಪ್ ಪಾಟೀಲ್, ಎನ್.ಉದಯ ಕುಮಾರ ಸಾಹುಕಾರ್, ಜೆ.ದೇವರಾಜಗೌಡ, ರಮೇಶ ದರ್ಶನಕರ್, ಗಡ್ಲ್ ಚನ್ನಬಸವ, ಮಂಜುನಾಥ ಸಾಹುಕಾರ್, ಶಿವಮೂರ್ತಿ, ಪಂಪಣ್ಣಗೌಡ, ದೇವೇಗೌಡ, ಮೇಶಕ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net