ಶನಿವಾರ ಹೂಗಾರ ಮಾದಯ್ಯ ಜಯಂತ್ಯುತ್ಸವ

Basavaraj Hugara Hugara Community
ಬಸವರಾಜ ಹೂಗಾರ.
Published on

ಸಿರವಾರ: ಪಟ್ಟಣದಲ್ಲಿ ಸೆ.24ರಂದು ಬಸವಾದಿ ಶರಣ ಹೂಗಾರ ಮಾದಯ್ಯ ಜಯಂತ್ಯುತ್ಸವ ಹಾಗೂ ಹೂಗಾರ ಸಮುದಾಯದ ಹಿರಿಯ ಕಲಾವಿದರಿಗೆ, ನೌಕರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದ ತಾಲೂಕು ಅಧ್ಯಕ್ಷ ಬಸವರಾಜ ಹೂಗಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸೆ.24 ರಂದು ಬೆಳಗ್ಗೆ 8.30 ಕ್ಕೆ ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿರುವ ಆಂಜನೇಯ ದೇವಸ್ಥಾನದಿಂದ ಸಜ್ಜಲಶ್ರೀ ಶರಣ ಆಶ್ರಮದವರೆಗೆ ಹೂಗಾರ ಮಾದಯ್ಯರ ಭಾವಚಿತ್ರ ಮೆರವಣಿಗೆ ಜರುಗಲಿದೆ. ನೀಲಗಲ್ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಸಮುದಾಯದ ಯತೀಶ್ವರಾನಂದ ಸ್ವಾಮೀಜಿ, ಬಸವರಾಜಪ್ಪ ತಾತ ಕಲ್ಲಂಗೇರಾ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ರಾಜಾ ವೆಂಕಟಪ್ಪ ನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಪ್ರಮುಖರಾದ ಈಶಪ್ಪ ಹೂಗಾರ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಹೂಗಾರ, ಜಗದೀಶ ಚಿಂಚರಕಿ, ಮೊರೆಪ್ಪ ಹೂಗಾರ, ಮಲ್ಲಿಕಾರ್ಜುನ ನವಲಕಲ್, ವಿರೇಶ ಕಲ್ಲಂಗೇರಾ, ಅಮರೇಶ ನುಗಡೋಣಿ, ಬಸವರಾಜ ನುಗಡೋಣಿ, ಶರಣಬಸವ, ಸೂಗೂರೇಶ ಅರುಣಕುಮಾರ, ರಮೇಶ ಚಿಂಚರಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net