ಹಾಲುಗಂಬ ಉತ್ಸವ ಅದ್ದೂರಿ

Untitled design
Published on

ಸಿರವಾರ: ಪಟ್ಟಣದ ಬಯಲು ಆಂಜನೇಯ ದೇವಸ್ಥಾನದ ಹಾಲುಗಂಬ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಬಯಲು ಆಂಜನೇಯ ಸ್ವಾಮಿಯ ಜಾತ್ರೆ ಮರುದಿನ ನಡೆದ ಹಾಲುಗಂಬ ಏರುವ ಸ್ಪರ್ಧೆ ನೋಡುಗರ ಗಮನ ಸೆಳೆಯಿತು. ಒಂದು ಗಂಟೆಗೂ ಅಧಿಕ ಸಮಯ ಹಾಲುಗಂಬ ಉತ್ಸವ ಸ್ಪರ್ಧೆ ನಡೆಯಿತು. ಒಬ್ಬರ ಮೇಲೆ ಒಬ್ಬರು ಹಾಲುಗಂಬ ಏರುವಾಗ ಕೆಳಗೆ ಜಾರಿ ಬೀಳುವ ದೃಶ್ಯಗಳನ್ನು ಕಂಡು ನೆರೆದಿದ್ದ ಯುವಕರು ಶಿಳ್ಳೆ ಚಪ್ಪಾಳೆಗಳ ಮೂಲಕ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು. ಗಂಗಾಮತಸ್ಥರು ಎರಚುತ್ತಿದ್ದ ನೀರಿನ ರಭಸಕ್ಕೆ ಕಂಬ ಹತ್ತಲು ಹರಸಾಹಸ ಪಡುವಂತಾಯಿತು.

ಸತತ ಎರಡನೇ ಬಾರಿಗೆ ಯುವಕ ವೀರೇಶ ಆದೆಪ್ಪ ಚಿನ್ನಾನ್ ಪ್ರಥಮ ಸ್ಥಾನ , ರಮೇಶ ದ್ವಿತೀಯ ಸ್ಥಾನ ಪಡೆದರು. ನಂತರ ವಿಜೇತರನ್ನು ಸನ್ಮಾನಿಸಲಾಯಿತು. ಈ ಉತ್ಸವ ನೋಡಲು ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳ ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net