ಜಿಟಿ ಜಿಟಿ ಮಳೆಗೆ ಬಾಗಿದ ಭತ್ತ, ರೈತರಿಗೆ ಎದುರಾಗಿದೆ ಭತ್ತ ಸಂರಕ್ಷಣೆಯ ಸವಾಲು

27112020 Kavital Cyclone effect pady
Published on

ಸಿರವಾರ: ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜತೆಗೆ ಜಿಟಿ ಜಿಟಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಭತ್ತ ಬಾಗುತ್ತಿದೆ.

ಕೆಲವೆಡೆ ಭತ್ತ ಕಟಾವು ಭರದಿಂದ ಸಾಗಿದ್ದು, ಭತ್ತ ಸಂರಕ್ಷಣೆಯ ಸವಾಲು ಎದುರಾಗಿದೆ. ಜಿಟಿ ಜಿಟಿ ಮಳೆಗೆ ತೊಯ್ದ ಭತ್ತವನ್ನು ಒಣಗಿಸುವುದು ಹೇಗೆಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಬಿಸಿಲಿಲ್ಲದೇ ಬರೀ ಮೋಡ ಕವಿದ ವಾತಾವರಣ ದಟ್ಟವಾಗಿ ವ್ಯಾಪಿಸಿದ್ದು, ರೈತಾಪಿ ವರ್ಗದ ಆತಂಕಕ್ಕೆ ಕಾರಣವಾಗಿದೆ.

ಜಿಟಿ ಜಿಟಿ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಲಕ್ಷಾಂತರ ರೂ.ನಷ್ಟ ಉಂಟಾಗುವ ಭೀತಿ ಭತ್ತ ಬೆಳೆಗಾರರಲ್ಲಿ ಶುರುವಾಗಿದೆ. ಜಿಟಿ ಜಿಟಿ ಮಳೆ ಜತೆ ಗಾಳಿ ಬೀಸುತ್ತಿದ್ದು, ಇದೇ ವಾತಾವರಣ ಇನ್ನೆರೆಡು ದಿನ ಮುಂದುವರಿದರೆ ಜಮೀನುಗಳಲ್ಲಿರುವ ಭತ್ತ ಸಂಪೂರ್ಣ ನೆಲಕ್ಕೊರಗುವ ಚಿಂತೆ ರೈತರನ್ನು ಕಾಡುತ್ತಿದೆ.


ಸ್ಥಗಿತ: ವಿವಿಧೆಡೆ ಆರಂಭಗೊಂಡಿದ್ದ ಭತ್ತ ಕಾಟಾವು ಜಿಟಿ ಜಿಟಿ ಮಳೆಯಿಂದಾಗಿ ಸ್ಥಗಿತಗೊಳಿಸುತ್ತಿದ್ದು, ರೈತರಿಗೆ ಮಾತ್ರವಲ್ಲದೆ, ಕಟಾವು ಯಂತ್ರಗಳ ಮಾಲೀಕರಿಗೂ ನಷ್ಟ ಉಂಟು ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net