ಸಿರಗುಪ್ಪದಲ್ಲಿ ಗಾಳಿ, ಮಳೆಗೆ ನೆಲಕ್ಕುರುಳಿದ ಮರಗಳು, ಸಿಬ್ಬಂದಿಯಿಂದ ತೆರವು ಕಾರ್ಯ

01062020 Siraguppa Rain
Published on

ಸಿರಗುಪ್ಪ: ನಗರದಲ್ಲಿ ಭಾನುವಾರ ಸುರಿದ ಮಳೆ ಗಾಳಿಗೆ ವಿವಿಧ ವಾರ್ಡ್‌ಗಳಲ್ಲಿನ ಮರಗಳು ನೆಲಕ್ಕುರುಳಿವೆ.

ತಹಸೀಲ್ದಾರ್ ಎಸ್.ಬಿ.ಕೂಡಲಗಿ, ನಗರದ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಸರ್ಕಾರಿ ಆಸ್ಪತ್ರೆಯ ವಸತಿ ಗೃಹ, ಸದಾಶಿವ ನಗರದ ವಿವಿಧ ರಸ್ತೆ, ವಿಎಸ್‌ಎಸ್‌ಎನ್ ನಂ.1 ಸೊಸೈಟಿ, ಕಂದಾಯ ಇಲಾಖೆ ವಸತಿಗೃಹ, ತಾಯಮ್ಮ ದೇವಿ ದೇವಸ್ಥಾನ, ಕೃಷಿ ಸಂಶೋಧನಾ ಕೇಂದ್ರ, ತಾಲೂಕು ಕ್ರೀಡಾಂಗಣದ ಮುಖ್ಯರಸ್ತೆಯಲ್ಲಿನ ಮರಗಳು ಗಾಳಿಗೆ ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಗರಸಭೆ, ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಮರಗಳನ್ನು ತೆರವುಗೊಳಿಸಲಾವುದು ಎಂದು ಹೇಳಿದರು.

ನಗರಸಭೆ ಅಧಿಕಾರಿ ರಂಗಸ್ವಾಮಿ, ಬಿಸಿಎಂ ಇಲಾಖೆಯ ಅಧಿಕಾರಿ ಶ್ಯಾಮಪ್ಪ, ವಿಎಗಳಾದ ಪರಮೇಶಿ, ಎರಿಸ್ವಾಮಿ, ರಾಮಪ್ಪ ಇದ್ದರು.

ಮಳೆ ಪ್ರಮಾಣ: ತಾಲೂಕಿನ ಕೆ.ಬೆಳಗಲ್ ಗ್ರಾಮದಲ್ಲಿ ಅತಿಹೆಚ್ಚು 41.4 ಮಿಮೀ ಹಾಗೂ ಎಂ.ಸೂಗೂರಿನಲ್ಲಿ ಕಡಿಮೆ 3.2 ಮಿಮೀ ಮಳೆಯಾಗಿದೆ. ಸಿರಗುಪ್ಪ 32 ಮಿಮೀ, ತೆಕ್ಕಲಕೋಟೆ 20.2, ಸಿರಿಗೇರಿ 11.3, ಹಚ್ಚೊಳ್ಳಿ 26.2, ಕರೂರಿನಲ್ಲಿ 16.4 ಮಿಮೀ ಮಳೆಯಾಗಿದೆ ಎಂದು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net