ಮತದಾನವು ಪವಿತ್ರವಾದ ಕಾರ್ಯ - ಚುನಾವಣಾಧಿಕಾರಿ ಸತೀಶ್ ಹೇಳಿಕೆ

Siraguppa Voting Drama
ಸಿರಗುಪ್ಪದಲ್ಲಿ ಸೋಮವಾರ ಮತದಾನ ಜಾಗೃತಿ ಮೂಡಿಸುವ ಬೀದಿ ನಾಟಕಕ್ಕೆ ಚುನಾವಣಾಧಿಕಾರಿ ಸತೀಶ್ ಚಾಲನೆ ನೀಡಿದರು.
Published on

ಸಿರಗುಪ್ಪ: ರಾಜ್ಯ-ದೇಶ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ಮತ ನಿರ್ಧರಿಸಲಿದೆ. ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನಕ್ಕೆ ಮುಂದಾಗಬೇಕು ಎಂದು ಚುನಾವಣಾಧಿಕಾರಿ ಸತೀಶ್ ಹೇಳಿದರು.

ನಗರದಲ್ಲಿ ಬಸ್ ನಿಲ್ದಾಣದಲ್ಲಿ ಸೋಮವಾರ ಸ್ವೀಪ್ ಸಮಿತಿ ಹಾಗೂ ನಗರಸಭೆಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಬ್ರಿಟಿಷರ ಕಾಲದಲ್ಲಿ ಹೆಚ್ಚು ತೆರಿಗೆ ಪಾವತಿಸುವವರಿಗೆ ಮಾತ್ರ ಮತದಾನದ ಹಕ್ಕಿತ್ತು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿದೆ ಎಂದರು.

ಆಮಿಷಗಳಿಗೆ ಒಳಗಾಗಿ ಮತ ಚಲಾಯಿಸಬಾರದು. ಮತದಾನವು ಪವಿತ್ರವಾದ ಕಾರ್ಯವಾಗಿದೆ. ಆದ್ದರಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೀದಿ ನಾಟಕ ಆಯೋಜಿಸಲಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ತಾಪಂ ಇಒ ಎಂ.ಬಸಪ್ಪ, ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ, ನಗರಸಭೆ ಸಿಬ್ಬಂದಿ ಮತ್ತು ಬೀದಿ ನಾಟಕ ಕಲಾವಿದರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net