ಗ್ರಾಪಂ ಸದಸ್ಯರು ಅಕ್ಷರಸ್ಥರಾಗಲಿ- ಸಿರಗುಪ್ಪ ತಾಪಂ ಇಒ ಎಂ.ಬಸಪ್ಪ ಸಲಹೆ

030123 Siraguppa Literacy Honors Programme
ಸಿರಗುಪ್ಪ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಕ್ಷರತಾ ಬೋಧಕರ ತರಬೇತಿ ಕಾರ್ಯಕ್ರಮವನ್ನು ತಾಪಂ ಇಒ ಎಂ.ಬಸಪ್ಪ ಉದ್ಘಾಟಿಸಿದರು.
Published on

ಸಿರಗುಪ್ಪ: ಸಾಕ್ಷರ ಸನ್ಮಾನ ಕಾರ್ಯಕ್ರಮದ ಮೂಲಕ ಅನಕ್ಷರಸ್ಥ ಗ್ರಾಪಂ ಸದಸ್ಯರನ್ನು ಸಾಕ್ಷರರನ್ನಾಗಿ ಮಾಡಲಾಗುತ್ತಿದೆ ಎಂದು ತಾಪಂ ಇಒ ಎಂ.ಬಸಪ್ಪ ಹೇಳಿದರು.

ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಕ್ಷರತಾ ಬೋಧಕರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಪಂಗಳ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲು ಸದಸ್ಯರೆಲ್ಲರೂ ಶಿಕ್ಷಣವಂತರಾಗಬೇಕು. ಈ ಕಾರಣಕ್ಕಾಗಿ ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತರಬೇತಿ ಪಡೆಯುತ್ತಿರುವ 77 ಬೋಧಕರು ತರಬೇತಿ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳಿಂದ ಎಲ್ಲ ಮಾಹಿತಿ ಪಡೆಯಬೇಕು. ನಮ್ಮ ತಾಲೂಕಿನಲ್ಲಿರುವ 498 ಸದಸ್ಯರ ಪೈಕಿ 211 ಅನಕ್ಷರಸ್ಥರಿದ್ದಾರೆ. ನಿಮ್ಮ ನಿಮ್ಮ ಭಾಗದ ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ಓದುವುದು, ಬರೆಯುವುದು ಮತ್ತು ಸಾಮಾನ್ಯ ವ್ಯವಹಾರ ಮಾಡುವುದನ್ನು ಕಲಿಸಬೇಕು ಎಂದರು.

ಬಿಇಒ ಗುರಪ್ಪ, ತಾಪಂ ಅಧಿಕಾರಿ ಬಸವರಾಜ, ಸಂಪನ್ಮೂಲ ವ್ಯಕ್ತಿಗಳಾದ ತಿಮ್ಮಪ್ಪ, ಮಾರೆಪ್ಪ ನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net