ಮೂವರು ಆಭರಣ ಕಳ್ಳರ ಬಂಧನ

Siraguppa Criminals
ವಿವಿಧೆಡೆ ನಡೆದ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಬಂಧಿಸಿರುವ ಸಿರಗುಪ್ಪ ನಗರ ಠಾಣೆ ಪೊಲೀಸರು ಆರೋಪಿಗಳಿಂದ ಬಂಗಾರ, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುವುದು.
Published on

ಸಿರಗುಪ್ಪ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಂಗಾರ, ಬೆಳ್ಳಿ ಮತ್ತು ಮೋಟಾರ್ ಸೈಕಲ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿವೈಎಸ್‌ಪಿ ವೆಂಕಟೇಶ್ ಹೇಳಿದರು.

ನಗರದ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ನಗರ ಠಾಣೆಯ 6 ಪ್ರಕರಣಗಳು, ಬಳ್ಳಾರಿಯ ಗಾಂಧಿನಗರ ಠಾಣೆಯ 1 ಪ್ರಕರಣಕ್ಕೆ ಇವರು ಬೇಕಾಗಿದ್ದರು. ಬಂಧಿತರಿಂದ 10 ತೊಲೆ ಬಂಗಾರದ ಆಭರಣ, 50 ತೊಲೆ ಬೆಳ್ಳಿ ವಸ್ತುಗಳು, ಬೈಕ್ ಮತ್ತು 2,000ರೂ. ವಶಪಡಿಸಿಕೊಳ್ಳಲಾಗಿದೆ ಎಂದರು.

ನಗರ ಸೇರಿ ತಾಲೂಕಿನ ಬಾಗೇವಾಡಿ, ಅಗಸನೂರು, ರಾರಾವಿ ಗ್ರಾಮಗಳ ಮನೆಗಳಲ್ಲಿ ನಡೆದ ಹಗಲು ಮತ್ತು ರಾತ್ರಿ ಕಳ್ಳತನ, ಇಬ್ರಾಹಿಂಪುರ ಶ್ರೀ ಗಾಳಿ ಮಾರೆಮ್ಮದೇವಿ ದೇವಸ್ಥಾನದಲ್ಲಿ ಬಂಗಾರ, ಬೆಳ್ಳಿ , ಮೋಟಾರ್ ಸೈಕಲ್ ಕಳ್ಳತನದಲ್ಲಿ ಇವರ ಪಾತ್ರವಿದೆ ಎಂದರು.

ಎಸ್‌ಪಿ ರಂಜೀತ್‌ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜರ ಮಾರ್ಗದರ್ಶನದಲ್ಲಿ ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್‌ಐ ಕೆ.ರಂಗಯ್ಯ ನೇತೃತ್ವದಲ್ಲಿ ಸಿಬ್ಬಂದಿ ವೆಂಕಟೇಶ್, ಮುನಿಸ್ವಾಮಿ, ಕಾಶಿನಾಥ, ಅಮರೇಶ, ಈರಣ್ಣ, ಚನ್ನಬಸವ, ಬೀರಪ್ಪ, ಸುದರ್ಶನ, ಬಾಲಚಂದ್ರ ರಾಥೋಡ್, ಬಸವರಾಜ ಅವರನ್ನೊಳಗೊಮಡ ತಂಡ ಇವರನ್ನು ಬಂಧಿಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net