

ಸಿರಗುಪ್ಪ: ತಹಸೀಲ್ದಾರ್ ಎಚ್.ವಿಶ್ವನಾಥಗೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಇಲ್ಲಿನ ಡಿವೈಎಸ್ಪಿ ವೆಂಕಟೇಶಗೆ ಶುಕ್ರವಾರ ಮನವಿ ಸಲ್ಲಿಸಿತು.
ಸಂಘದ ತಾಲೂಕು ಅಧ್ಯಕ್ಷ ಎಚ್.ಮಂಜುನಾಥ ಮಾತನಾಡಿ, ತಹಸೀಲ್ದಾರ್ ಹಾಗೂ ದಂಡಾಧಿಕಾರಿ ಎಚ್.ವಿಶ್ವನಾಥ ಅವರಿಗೆ ಇಕ್ಬಾಲ್ ಬೇಗ್ ಜಿ ಎನ್ನುವವರು ಕರೆ ಮಾಡಿ ಬೆದರಿಕೆ ಕರೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ದೇಶನೂರು ಗ್ರಾಮದ ಸ.ನಂ.601// 1.10 ಎಕರೆ ಮತ್ತು ಇಬ್ರಾಹಿಂಪುರ ಗ್ರಾಮ ಸ.ನಂ.117// 1.40 ಎಕರೆ ಈ ಜಮೀನ ಹಕ್ಕು ಬದಲಾವಣೆ ಮಾಡಲು ಆದೇಶ ಮಾಡಬೇಕೆಂದು ಇಕ್ಬಾಲ್ ಬೇಗ್ ಜಿ ಅವರ ಬೇಡಿಕೆಯಾಗಿದೆ. ಇವರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಇದ್ದರು.