ಜಯಂತಿ ಆಚರಣೆಯಲ್ಲಿ ಜನರು ಪಾಲ್ಗೊಳ್ಳಲಿ

ಸಿರಗುಪ್ಪ ತಹಸಿಲ್ ಕಚೇರಿಯಲ್ಲಿ ಬಸವೇಶ್ವರ ಮತ್ತು ಶಂಕರಾಚಾರ್ಯ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್ ಎಚ್.ವಿಶ್ವನಾಥ್, ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ.ಸಿದ್ದಯ್ಯ, ಪ,ಪಂ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಮ, ತಾ.ಪಂ ವ್ಯವಸ್ಥಾಪಕಿ ಸುಜಾತಾ, ಸಿಡಿಪಿಒ ಪ್ರದೀಪ್ ಕುಮಾರ್ ಹಾಗೂ ವೀರಶೈವ ಸಮಾಜದ ಮುಖಂಡರು ಇದ್ದರು.

Published on

ಸಿರಗುಪ್ಪ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಏ.30ರಂದು ಬಸವ ಜಯಂತಿ ಮತ್ತು ಮೇ.2 ರಂದು ಶ್ರೀ ಶಂಕರಚಾರ್ಯರ ಜಯಂತಿ ಅಂಗವಾಗಿ ತಹಸೀಲ್ದಾರ್ ಎಚ್.ವಿಶ್ವನಾಥ ನೇತೃತ್ವದಲ್ಲಿ ಮಂಗಳವಾರ ಪೂರ್ವಭಾವಿ ಸಿದ್ದತಾ ಸಭೆ ನಡೆಯಿತು.

ವೀರಶೈವ ಸಮಾಜದ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಸೇರಿ ಬಸವ ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಚರ್ಚಿಸಲಾಯಿತು. ಬಸವ ಜಯಂತಿ ಆಚರಣೆಗೆ ಸರ್ಕಾರ 20 ಸಾವಿರ ರೂ. ನಿಗದಿಪಡಿಸಿದೆ. ಈ ಅನುದಾನ ಸಾಲುತ್ತಿಲ್ಲ, ಮುಂದಿನ ಆರ್ಥಿಕ ವರ್ಷದಿಂದ ಬಸವ ಜಯಂತಿಗೆ ಅನುದಾನ ಹೆಚ್ಚಿಸುವಂತೆ ವೀರಶೈವ ಮುಖಂಡರು ಮನವಿ ಮಾಡಿದರು.

ತಹಸೀಲ್ದಾರ್ ಎಚ್.ವಿಶ್ವನಾಥ್ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವೇಶ್ವರ ಮತ್ತು ಶಂಕರಾಚಾರ್ಯ ಜಯಂತಿ ಆಚರಣೆ ನಿಮಿತ್ತ ವೇದಿಕೆ ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಮಹನೀಯರ ಜಯಂತಿಯ ಮೆರವಣಿಗೆ ಬಗ್ಗೆ ಚರ್ಚಿಸಲಾಗಿದೆ. ಪಟ್ಟಣದ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಯೋಗ ಮತ್ತು ಧ್ಯಾನ ಬಗ್ಗೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಜನರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net