

ಸಿರಗುಪ್ಪ: ಸೆ.3 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟಗಳು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಚನ್ನಪ್ಪ ಹೇಳಿದರು. ನಗರದ ತಾಲೂಕು ದೈಹಿಕ ಶಿಕ್ಷಕರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬಳ್ಳಾರಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕು ದೈಹಿಕ ಶಿಕ್ಷಕರ ಸಂಘದ ಸಹಯೋಗದಲ್ಲಿ ದಸರಾ ಕ್ರೀಡಾ ಕೂಟ ನಡೆಸಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಅಥ್ಲೆಟಿಕ್, ಕಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋ ಬಾಲ್ ಸೇರಿ ಇತರೆ ಪಂದ್ಯಗಳು ನಡೆಯಲಿವೆ. ಆಸಕ್ತ ಕ್ರೀಡಾಪಟುಗಳು ಸೆ.3ರಂದು ಬೆಳಗ್ಗೆ 8ಗಂಟೆಯ ಒಳಗೆ ತಮ್ಮ ತಂಡಗಳ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ದೈಹಿಕ ಶಿಕ್ಷಕರಾದ ಉಪೇಂದ್ರ(9901505558), ಎಸ್ ಅಜ್ಮೀರ್(9972405551), ಈರಣ್ಣ(9620901639), ರಮೇಶ(9845847370) ಸಂಪರ್ಕಿಸಲು ತಿಳಿಸಿದರು. ದೈಹಿಕ ಶಿಕ್ಷಕರಾದ ಎಸ್.ಅಜ್ಮೀರ್, ಈರಣ್ಣ, ರಮೇಶ, ಉಸ್ಮಾನ್ ಇದ್ದರು.