

ಸಿರಗುಪ್ಪ: ಮಣ್ಣೂರು ಸುಗೂರು, ರುದ್ರಪಾದ, ನಡವಿ, ಉಡೇಗೋಳ, ನಿಟ್ಟೂರು, ಹೆರಕಲ್, ಕೆ.ತಾಂಡ, ಕೆಂಚನಗುಡ್ಡ ಮತ್ತ ದೇವಲಾಪುರ ಗ್ರಾಮಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಬಸ್ ಡಿಪೋ ಮ್ಯಾನೇಜರ್ ಉಮಾ ಮಹೇಶ್ವರಗೆ ವಿದ್ಯಾರ್ಥಿಗಳು ಮಂಗಳವಾರ ಮನವಿ ಸಲ್ಲಿಸಿದರು.
ಕಂಪ್ಲಿ ಹಾಗೂ ಬೆಂಗಳೂರಿನಿಂದ ಮಣ್ಣೂರು ಸುಗೂರು ಮಾರ್ಗವಾಗಿ ಸಿರಗುಪ್ಪಗೆ ಬರುವ ಬಸ್‌ನಲ್ಲಿ ಜಾಗ ಇರುವುದಿಲ್ಲ. ಇದರಿಂದಾಗಿ ನಮಗೆ ತೊಂದರೆಯಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ಶಾಲೆ ಮತ್ತು ಕಾಲೇಜಿಗೆ ತಡವಾಗಿ ಹೋಗುವಂತಾಗಿದೆ. ಕೆಲವರು ಶಾಲೆ-ಕಾಲೇಜಿಗೆ ತೆರಳುವುದಿಲ್ಲ ಎಂದು ತಿಳಿಸಿದರು.