

ಸಿರಗುಪ್ಪ: ಮಾದಕ ವಸ್ತುಗಳಿಗೆ ದಾಸರಾದರೆ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗುವುದರಿಂದ ಜೀವನವೇ ಹಾಳಾಗಲಿದೆ ಎಂದು ಡಿವೈಎಸ್ಪಿ ವೆಂಕಟೇಶ ಹೇಳಿದರು.
ಇದನ್ನೂ ಓದಿ: ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮುದಾಯ
ನಗರದ ಬಿ.ಇ. ಹನುಮಂತಮ್ಮ ಮೆಮೋರಿಯಲ್ ಪದವಿ ಕಾಲೇಜ್ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದಕ ವಸ್ತುಗಳಿಂದ ಆರ್ಥಿಕವಾಗಿಯೂ ದಿವಾಳಿ ಆಗಬೇಕಾಗುತ್ತದೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಸುಂದರ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಬೇಕು. ಹೀಗಾಗಿ ಡಗ್ಸ್ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಿಪಿಐಗಳಾದ ಯಶವಂತ ಬಿಸ್ನಳ್ಳಿ, ಸುಂದರೇಶ್, ಪಿಎಸ್‌ಐ ಸದ್ದಾಂ ಹುಸೇನ್, ಪ್ರಾಚಾರ್ಯ ಪವನ್ ಕುಮಾರ್, ಉಪನ್ಯಾಸಕರಾದ ಸಂಯುಕ್ತ ಕುಲರ‌್ಣಿ, ರುದ್ರಪ್ಪ, ಅಜುರುದ್ದೀನ್ ಇತರರಿದ್ದರು.