ಶ್ರೀ ವಸುಧೇಂದ್ರ ತೀರ್ಥರ ಆರಾಧನಾ ಮಹೋತ್ಸವ

sirguppa vasudhendra
ಕೆಂಚನಗುಡ್ಡದಲ್ಲಿ ಶ್ರೀ ವಸುಧೇಂದ್ರ ತೀರ್ಥರ ಪೂರ್ವಾರಾಧನೆ ಅಂಗವಾಗಿ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಸಿರಗುಪ್ಪ: ಕೆಂಚನಗುಡ್ಡ ಗ್ರಾಮದ ಹತ್ತಿರ ಹರಿಯುವ ತುಂಗಭದ್ರಾ ನದಿ ತೀರದಲ್ಲಿರುವ ಶ್ರೀ ವಸುಧೇಂದ್ರ ತೀರ್ಥರ 262ನೇ ಆರಾಧನಾ ಮಹೋತ್ಸವ ಶುಕ್ರವಾರ ಮಂತ್ರಾಲಯ ಮಠದಿಂದ ಅದ್ದೂರಿಯಾಗಿ ಜರುಗಿತು.

ಪೂರ್ವಾರಾಧನೆ ಅಂಗವಾಗಿ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ತುಳಸಿ ಅರ್ಚನೆ, ಮಹಾ ನೈವೇದ್ಯ, ಅಲಂಕಾರ, ಹಸ್ತೋದಕ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ಭಕ್ತರಿಗೆ ವಿತರಿಸಲಾಯಿತು.

ಶ್ರೀ ವಸುದೇಂದ್ರ ತೀರ್ಥರ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬಳ್ಳಾರಿ, ರಾಯಚೂರು, ಸಿಂಧನೂರು, ಸಿರಗುಪ್ಪ, ಗಂಗಾವತಿ, ಆದೋನಿ, ಮಂತ್ರಾಲಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net