ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಲಹೆ

030922 Siraguppa Taluk Level Dussehra Games
ಸಿರಗುಪ್ಪದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಕಾರ್ಯಕ್ರಮ.
Published on

ಸಿರಗುಪ್ಪ: ಕ್ರೀಡಾಪಟುಗಳು ಯಾವುದೇ ಆಟದಲ್ಲಿ ಗೆಲುವು - ಸೋಲಿನ ಬಗ್ಗೆ ಆಲೋಚಿಸದೆ ತಮ್ಮಲ್ಲಿರುವ ಆಟದ ಸಾಮರ್ಥ್ಯವನ್ನು ತೋರಿಸಬೇಕೆಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಮಲೀಕರಣ ಹಾಗೂ ಕ್ರೀಡಾ ಇಲಾಖೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಕ್ರೀಡಾಪಟುಗಳಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಡುವ ಸಾಮರ್ಥ್ಯ ಉಳ್ಳವರಿದ್ದು, ದೈಹಿಕ ಶಿಕ್ಷಕರು ಉತ್ತಮ ಆಟ ಆಡಬಲ್ಲ ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ಮೂಲಕ ಪ್ರೋತ್ಸಾಹಿಸಬೇಕೆಂದು ತಿಳಿಸಿದರು.

ತಾಪಂಇಒ ಎಂ.ಬಸಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಈರಣ್ಣ, ಬಿಇಒ ಪಿ.ಡಿ.ಭಜಂತ್ರಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಚನ್ನಪ್ಪ, ದೈಹಿಕ ಶಿಕ್ಷಕರಾದ ರಮೇಶ, ಉಪೇಂದ್ರ, ಅಜ್ಮೀರ್, ಈರಣ್ಣ, ಮಲ್ಲಿಕಾರ್ಜುನ, ಉಸ್ಮಾನ್ ಹಾಗೂ ಕ್ರೀಡಾ ಪಟುಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net