ಹಾವು ಕಚ್ಚಿ ರೈತ ಸಾವು

25072022 SIRAGUPPA SNAKE
Published on

ಸಿರಗುಪ್ಪ: ಹೊಲ ಹರುಗುವ ವೇಳೆ ಹಾಚು ಕಚ್ಚಿದ್ದರಿಂದ ತಾಲೂಕಿನ ಕುರುವಳ್ಳಿ ಗ್ರಾಮದ ರೈತನೊಬ್ಬ ಸೋಮವಾರ ಮೃತಪಟ್ಟಿದ್ದಾರೆ. ನಾರಾಯಣ ಮೂರ್ತಿ(45) ಮೃತ. ತನ್ನ ಹೊಲದಲ್ಲಿ ಹತ್ತಿ ಬೆಳೆ ಬಿತ್ತಿದ್ದು, ಕಳೆ ತೆಗೆಯಲು ಎತ್ತುಗಳನ್ನು ಬಳಸಿ, ಹರಗುವಾಗ ಅಲ್ಲೇ ಇದ್ದ ಹಾವು ಕಾಲಿಗೆ ಕಚ್ಚಿದೆ. ತಕ್ಷಣವೇ ಹೊದಲ್ಲಿದ್ದ ಕುಟುಂಬದ ಸದಸ್ಯರು ಆತನನ್ನು ನಗರದ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆ ಫಲ ನೀಡಲಿಲ್ಲ. ಹಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net