ವಿಜ್ಞಾನ ಕಾರ್ಯಕ್ರಮದಿಂದ ವೈಚಾರಿಕತೆ, ಸಿರಗುಪ್ಪ ಬಿಇಒ ಪಿ.ಡಿ.ಭಜಂತ್ರಿ ಅಭಿಪ್ರಾಯ

050922 Siraguppa Taluk level science seminar
ಸಿರಗುಪ್ಪದ ಶಾಂತಿನಿಕೇತನ ಅನುದಾನಿತ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ನಾಟಕ ಸ್ಫರ್ಧೆ ಕಾರ್ಯಕ್ರಮವನ್ನು ಬಿಇಒ ಪಿ.ಡಿ.ಭಜಂತ್ರಿ ಉದ್ಘಾಟಿಸಿದರು.
Published on

ಸಿರಗುಪ್ಪ: ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ, ಹೊಸ ಆವಿಷ್ಕಾರ, ಮೂಢನಂಬಿಕೆ, ವಿಜ್ಞಾನ ವಿಚಾರದ ಕಾರ್ಯ ಚಟುವಟಿಕೆಗಳನ್ನು ಮೂಡಿಸುವ ಉದ್ದೇಶದಿಂದ ಇಂತಹ ವಿಜ್ಞಾನ ಕಾರ್ಯಕ್ರಮಗಳು ನಡೆಸಲಾಗುತ್ತದೆ ಎಂದು ಬಿಇಒ ಪಿ.ಡಿ.ಭಜಂತ್ರಿ ತಿಳಿಸಿದರು.

ನಗರದ ಶಾಂತಿನಿಕೇತನ ಅನುದಾನಿತ ಪ್ರೌಢ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ನಾಟಕ ಸ್ಫರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net