2.57ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯ: ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾಹಿತಿ

081022 Tekkalakote MLA Bhoomi Pooja
ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಶನಿವಾರ ಭೂಮಿಪೂಜೆ ನೆರವೇರಿಸಿದರು.
Published on

ಸಿರಗುಪ್ಪ: ಕಳೆದ 10 ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2.57 ಕೋಟಿ ರೂ. ವೆಚ್ಚದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದರು.

ತೆಕ್ಕಲಕೋಟೆಯಲ್ಲಿ ಕ್ರೈಸ್ (ಕ.ವ.ಮತ್ತು ಶಿಕ್ಷಣ ಸಂಸ್ಥೆ) ಯೋಜನೆಯಡಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇತ್ತೀಚೆಗೆ ಹಿಂದುಳಿದ ವರ್ಗದಲ್ಲಿ ಓದುವ ಬಾಲಕಿಯರ ಸಂಖ್ಯೆ ಹೆಚ್ಚಾಗಿದೆ. ಇವರಿಗೆ ಮೂಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ವಸತಿ ನಿಲಯ ನಿರ್ಮಿಸುತ್ತಿದ್ದು, ಗುತ್ತಿಗೆದಾರರು ಸುಸಜ್ಜಿತ ಹಾಗೂ ಬಹು ವರ್ಷ ಬಾಳಿಕೆ ಬರುವಂತೆ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಬೇಕು. ಕಾಮಗರಿ ಕಳಪೆಯಾದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಬಿಸಿಎಂ ಇಲಾಖೆ ತಾಲೂಕು ಅಧಿಕಾರಿ ಎ.ಗಾದಿಲಿಂಗಪ್ಪ, ಪಪಂ ಸದಸ್ಯರಾದ ಎಂ.ರುದ್ರಮ್ಮ, ಸಿಂಗ್ರಿಸಿದ್ದಯ್ಯ, ಪರಸಣ್ಣ, ವಿ.ದ್ಯಾವಣ್ಣ, ಮುಖಂಡರಾದ ಎಂ.ಎಸ್. ವೆಂಕಟಪ್ಪನಾಯಕ, ಎಚ್.ಕೆ.ತಿಮ್ಮಪ್ಪ, ಕೆ. ಕೃಷ್ಣ, ನೆಣಿಕೆಪ್ಪ, ಡಿ.ವೀರೇಶ, ಎಂ.ಎಸ್. ಕೊಮಾರೆಪ್ಪ, ಯು.ವೆಂಕೋಬ, ಕೆ.ಮಾರುತಿ, ಪಕ್ಕೀರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net