ಅಶ್ಲೀಲ ಪದ ಬಳಕೆ ಸಲ್ಲದು

Untitled design(9)
ಸಿರಗುಪ್ಪ ಠಾಣೆಯ ಸಿಪಿಐ ಹನುಮತಂಪ್ಪಗೆ ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಟ್ರಸ್ಟ್ ಅಧ್ಯಕ್ಷ ಬಿ.ಎಮ್.ಸತೀಶ್, ಟ್ರಸ್ಟ್ ಉಪಾಧ್ಯಕ್ಷ ಟಿ ನರಸಿಂಹ ನಾಯಕ್, ಪ್ರಧಾನ ಕಾರ್ಯದರ್ಶಿ ಬಾಗೇವಾಡಿ ಮುದುಕಪ್ಪ, ಸಂಘಟನಾ ಕಾರ್ಯದರ್ಶಿ ಎನ್.ಬಿ.ವೆಂಕಟೇಶ್ ಇತರರಿದ್ದರು.
Published on

ಸಿರಗುಪ್ಪ: ಮಾಜಿ ಸಂಸದ ರಮೇಶ ಕತ್ತಿ ಅವರು ವಾಲ್ಮೀಕಿ ಬೇಡ ಸಮುದಾಯದಕ್ಕೆ ಜಾತಿ ನಿಂದನೆ ಮಾಡಿರುವುದನ್ನು ಖಂಡಿಸಿ ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ಧಿ ಟ್ರಸ್ಟ್ ಪಟ್ಟಣದ ಠಾಣೆಯ ಸಿಪಿಐ ಹನುಮತಂಪ್ಪಗೆ ಗುರುವಾರ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಅ.19 ರಂದು ಡಿ.ಸಿ.ಸಿ.ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಚಿಕ್ಕೋಡಿ ಮಾಜಿ ಸಂಸದ ರಮೇಶ್ ಕತ್ತಿ ತಮ್ಮ ಬೆಂಬಲಿಗರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಬೇಡ ಸಮುದಾಯದ ಕುರಿತು ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಮ್ ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.

ಟ್ರಸ್ಟ್ ಉಪಾಧ್ಯಕ್ಷ ಟಿ ನರಸಿಂಹ ನಾಯಕ್, ಪ್ರಧಾನ ಕಾರ್ಯದರ್ಶಿ ಬಾಗೇವಾಡಿ ಮುದುಕಪ್ಪ, ಸಂಘಟನಾ ಕಾರ್ಯದರ್ಶಿ ಎನ್.ಬಿ.ವೆಂಕಟೇಶ್, ಸಮಾಜದ ಮುಖಂಡರಾದ ಹೊನ್ನಪ್ಪ, ಗಾದಿಲಿಂಗಪ್ಪ, ಸಣ್ಣ ವೆಂಕಟೇಶ್,ಬಿ ಈರಣ್ಣ,ನಾಡಂಗ ವೆಂಕೋಬ, ಸಣ್ಣ ಯಲ್ಲಪ್ಪ, ವೆಂಕಟೇಶ್, ಟಿ ಯಲ್ಲಪ್ಪ, ನಾಡಂಗ ಹನುಮೇಶ,ಸಿ.ಎಚ್.ಕೇಶಪ್ಪ, ವಿಜ್ಞೇಶ್, ಅಶೋಕ್, ಪಿ.ಹನುಮಂತ, ಬಿ.ಕೆ.ನರಸಪ್ಪ, ಪಂಪಣ್ಣ ಶ್ರೀಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net