ನಡೆದುಕೊಳ್ಳುವ ಬಗೆ ತಿಳಿಸುವ ಸಂವಿಧಾನ

27112022 siraguppa Constitution Day programme
Published on

ಸಿರಗುಪ್ಪ: ಒಂದು ದೇಶದ ಆಡಳಿತ ಸುಗಮವಾಗಿ ನಡೆಯಲು ಬೇಕಾದ ಕಾಯ್ದೆ, ಕಾನೂನುಗಳನ್ನು ಸಂವಿಧಾನ ಒದಗಿಸಿರುತ್ತದೆ ಎಂದು ಸಾರ್ವಜನಿಕ ಗ್ರಂಥಾಲಯ ಅಧಿಕಾರಿ ಜಗದೀಶ್ ತಿಳಿಸಿದರು.

ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಪ್ರಜೆಗಳ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಸುವ ಸಂವಿಧಾನ, ಒಂದು ದೇಶದ ಪ್ರಜೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು, ದೇಶಕ್ಕಾಗಿ ಏನು ಮಾಡಬೇಕು ಎನ್ನುವುದನ್ನು ಸಂವಿಧಾನದ ಪೀಠಿಕೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಅದರಂತೆ ನಾವು ನಮ್ಮ ದೇಶದ ಸಂವಿಧಾನಕ್ಕೆ ಬದ್ಧ್ದರಾಗಿ ನಡೆದುಕೊಳ್ಳೋಣ ಎಂದರು.

ಭೀಮ್ ಆರ್ಮಿ: ಸಿರಗುಪ್ಪದ ಭೀಮ್ ಆರ್ಮಿ ಸಂಘಟನೆ ಶನಿವಾರ ಸಂವಿಧಾನ ಸಮರ್ಪಣಾ ದಿನ ಆಚರಿಸಿತು. ಈ ವೇಳೆ ಡಾ. ಬಿ.ಆರ್.ಅಂಬೇಡ್ಕರ್ ವಿಗ್ರಹಕ್ಕೆ ಮಾಲರ್ಪಣೆ ಮಾಡಲಾಯಿತು. ಭಾರತ ಸಂವಿಧಾನದ ಪೀಠಿಕೆ ಹೇಳಿ, ಸಿಹಿ ಹಂಚಲಾಯಿತು. ಸಂಘಟನೆಯ ಸ್ಥಳೀಯ ಅಧ್ಯಕ್ಷ ಕೊಡ್ಲೆ ಧರ್ಮರಾಜ, ಪ್ರಮುಖರಾದ ಪಾರ್ಥ, ವೀರೇಶ, ಮಾರೆಪ್ಪ, ರಾಮಣ್ಣ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net