ಪಿಂಚಣಿ ಮೊತ್ತ ಐದು ಸಾವಿರಕ್ಕೇರಿಸಲು ತಾಲೂಕು ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಒಕ್ಕೂಟ ಒತ್ತಾಯ

180722 Siraguppa Taluk Devadasi Woman Appeal
ಸಿರಗುಪ್ಪ ತಾಲೂಕು ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಒಕ್ಕೂಟದಿಂದ ಶಿರಸ್ತೆದಾರ್ ಸಿದ್ದೇಶ್ವರಗೆ ಸೋಮವಾರ ಮನವಿ ಸಲ್ಲಿಸಲಾಯಿತು.
Published on

ಸಿರಗುಪ್ಪ: ವಿಮುಕ್ತ ದೇವದಾಸಿಯರಿಗೆ ನೀಡುತ್ತಿರುವ ಪಿಂಚಣಿ ಹಣದ ಮೊತ್ತವನ್ನು ಐದು ಸಾವಿರಕ್ಕೇರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ತಾಲೂಕು ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಒಕ್ಕೂಟ ಒತ್ತಾಯಿಸಿದೆ.

ಶಿರಸ್ತೇದಾರ ಸಿದ್ದೇಶ್ವರಗೆ ಸೋಮವಾರ ಮನವಿ ಸಲ್ಲಿಸಿತು. ಈ ವೇಳೆ ಮಾತನಾಡಿದ ಸಂಘಟನೆ ತಾಲೂಕಾಧ್ಯಕ್ಷೆ ಹುಲಿಗೆಮ್ಮ, ನಾಲ್ಕು ತಿಂಗಳ ಪಿಂಚಣಿ ಬಿಡುಗಡೆ ಮಾಡಿಲ್ಲ. ಕೂಡಲೇ ಬಿಡುಗಡೆ ಮಾಡಬೇಕು. ನಮ್ಮ ಮಕ್ಕಳಿಗೆ ಸರ್ಕಾರಿ, ಅರೆಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಿಡಬೇಕು. ಯಲ್ಲಾಲಿಂಗನಗರದ ಹಿಂದುಗಡೆ ಇರುವ ಸರ್ಕಾರಿ ಪ್ಲಾಟುಗಳನ್ನು ದೇವದಾಸಿಯರ ಕುಟುಂಬಕ್ಕೆ ಹಂಚಿಕೆ ಮಾಡಬೇಕು. ತಾಲೂಕಿನ ಹೋಬಳಿಗಳಲ್ಲಿ ವಸತಿ ಸಹಿತ ವೃತ್ತಿ ಕೌಶಲ ತರಬೇತಿ ಕೇಂದ್ರ ಸ್ಥಾಪಿಸಿ ತರಬೇತಿ ಪಡೆದವರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net