ಜು.11ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

BM Satish SC ST Siraguppa
ಬಿ.ಎಂ.ಸತೀಶ್
Published on

ಸಿರಗುಪ್ಪ: ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಿಸದ ಸರ್ಕಾರದ ಕ್ರಮ ಖಂಡಿಸಿ ಜು.11ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ.ಜಾ ಮತ್ತು ಪ.ಪಂ. ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಮುಖಂಡ ಬಿ.ಎಂ.ಸತೀಶ್ ತಿಳಿಸಿದರು. ನಗರದ ಸಿ.ಡಿ.ಪಿ.ಒ. ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿಯಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು.

ಎಸ್ಸಿ-ಎಸ್ಟಿ ಪರ ಯಾವ ಸರ್ಕಾರಗಳು ಇಲ್ಲ. ಸಮುದಾಯದ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕಳೆದ 149 ದಿನಗಳಿಂದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಾಪುರಿ ಸ್ವಾಮೀಜಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.

ಸರ್ಕಾರ ನಾಗಮೋಹನ್‌ದಾಸ್ ಆಯೋಗದ ಪ್ರಕಾರ ಮೀಸಲಾತಿ ಜಾರಿಗೊಳಿಸದೆ ಹಂತ ಹಂತವಾಗಿ ಕಡಿತಗೊಳಿಸಲು ಯತ್ನಿಸುತ್ತಿರುವುದು ಸರಿಯಾದ ಕ್ರಮವಲ್ಲ. ಈ ಧೋರಣೆ ಖಂಡಿಸಿ ಡಿಸಿ ಕಚೇರಿ ಮುತ್ತಿಗೆಗೆ ನಿರ್ಧರಿಸಲಾಗಿದೆ. ಇದಕ್ಕೆ ಸಮುದಾಯದವರು ಬೆಂಬಲ ನೀಡಬೇಕೆಂದು ಕೋರಿದರು.

ಮುಖಂಡರಾದ ಎಚ್.ಬಿ.ಗಂಗಪ್ಪ, ಕೊಡ್ಲೆ ಮಲ್ಲಿಕಾರ್ಜುನ, ಬಸವರಾಜ, ಧರಪ್ಪನಾಯಕ, ಫಣೀಂದ್ರ, ರಾಧರಪ್ಪನಾಯಕ, ವಾ.ಹುಲುಗಪ್ಪ, ರಾಮನಾಯಕ, ಮುದುಪ್ಪ, ಈರಣ್ಣ, ವೆಂಕಟೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net