ಪೌರಕಾರ್ಮಿಕರು ಸ್ವಚ್ಚ ನಗರದ ನಿರ್ಮಾರ್ತೃಗಳು, ಸಿರಗುಪ್ಪ ನಗರಸಭೆ ಕಂದಾಯ ಅಧಿಕಾರಿ ಕೆ.ವೆಂಕೋಬ ಅಭಿಪ್ರಾಯ

230922 Siraguppa Civil Labor Day celebration
ಸಿರಗುಪ್ಪದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಥಾದಲ್ಲಿ ಪೌರಕಾರ್ಮಿಕರು ನೃತ್ಯಮಾಡುತ್ತಿರುವುದು.
Published on

ಸಿರಗುಪ್ಪ: ದೇಶದಲ್ಲಿ ಪ್ರತಿಯೊಂದು ನಗರದ ಸ್ವಚ್ಛತೆಯ ಹಿಂದೆ ಪೌರಕಾರ್ಮಿಕರ ಶ್ರಮವಿದೆ ಎಂದು ನಗರಸಭೆ ಕಂದಾಯ ಅಧಿಕಾರಿ ಕೆ.ವೆಂಕೋಬ ಅಭಿಪ್ರಾಯಪಟ್ಟರು.

ನಗರದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಥಾದಲ್ಲಿ ಮಾತನಾಡಿದರು. ಗಡಿಯಲ್ಲಿ ಯೋಧರು ದೇಶವನ್ನು ರಕ್ಷಿಸಿದರೆ, ಪೌರಕಾರ್ಮಿಕರು ಸ್ವಚ್ಛತೆ ಕಾಪಾಡುವ ಮೂಲಕ ಎಲ್ಲರ ಆರೋಗ್ಯವನ್ನು ರಕ್ಷಿಸುತ್ತಾರೆ. ಪೌರಕಾರ್ಮಿಕರು ಸುಂದರ ನಗರ ನಿರ್ಮಾರ್ತೃಗಳು. ಅವರ ಸೇವೆಗೆ ಬೆಲೆ ಕಟ್ಟಲಾಗದು. ಪೌರಕಾರ್ಮಿಕರ ದಿನದಂದು ಅವರ ಶ್ರ, ಸ್ಮರಿಸುವ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದರು.

ನಗರದಲ್ಲಿ ರೋಗ-ರುಜಿನಗಳು ಹರಡದಂತೆ ನೋಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಯೂ ಗಮನ ಕೊಡಬೇಕು. ಅವರು ಆರೋಗ್ಯವಾಗಿದ್ದರೆ ನಾಗರಿಕರೂ ಆರೋಗ್ಯದಿಂದಿರಲು ಸಾಧ್ಯ. ಕೆಲಸದ ಸಮಯದಲ್ಲಿ ಸರ್ಕಾರ ನೀಡಿದ ಗ್ಲೌಸ್ ಮತ್ತು ಶೂಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ನೃತ್ಯ ಮಾಡಿ ಹರ್ಷಿಸಿದರು. ಪೌರಕಾರ್ಮಿಕರಾದ ಇಬ್ರಾಹಿಂಸಾಬ್, ಭಾಸ್ಕರ, ಹನುಮಕ್ಕ, ಚಂದ್ರಮ್ಮ, ಮಾರೆಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net