ಆತ್ಮಸ್ಫೂರ್ತಿಯಿಂದ ಪರೀಕ್ಷೆಗಳನ್ನು ಎದುರಿಸಿ

101222 Kudadarahal test celebration special event
ಕುಡುದರಹಾಳು ಪ್ರೌಢಶಾಲೆಯಲ್ಲಿ ಪ್ರೀರಣಾ ಸ್ಫೂರ್ತಿ ಪರೀಕ್ಷಾ ಸಂಭ್ರಮ ವಿಶೇಷ ಕಾರ್ಯಕ್ರಮವನ್ನು ಡಿವೈಎಸ್‌ಪಿ ಸತ್ಯನಾರಾಯಣ ಉದ್ಘಾಟಿಸಿದರು.
Published on

ಸಿರಗುಪ್ಪ: ನಿರಂತರ ಕಲಿಕೆ, ಆತ್ಮಸ್ಫೂರ್ತಿಯಿಂದ ಪರೀಕ್ಷೆಗಳನ್ನು ಎದುರಿಸಿದಲ್ಲಿ ಶೇ.100 ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಉಪನಿರ್ದೇಶಕ ಅಂದಾನಪ್ಪ ವಡಿಗೇರಿ ತಿಳಿಸಿದರು. ಕುಡುದರಹಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾ ಸ್ಫೂರ್ತಿ ಪರೀಕ್ಷಾ ಸಂಭ್ರಮ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಿವೈಎಸ್‌ಪಿ ಸತ್ಯನಾರಾಯಣ, ಬಿಇಒ ಗುರ‌್ರಪ್ಪ, ಡಯಟ್ ಹಿರಿಯ ಉಪನ್ಯಾಸಕ ಪಿ.ಡಿ.ಭಜಂತ್ರಿ, ಉಪನ್ಯಾಸಕ ಎಚ್.ಕೆ.ಪಾಂಡು, ವಿಷಯ ಪರಿವೀಕ್ಷಕರಾದ ಬಸವರಾಜ, ಸತ್ಯನಾರಾಯಣ, ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net