ಸಮಾಜಕ್ಕೆ ಮಾದರಿಯಾಗಲಿ ಮಠಾಧೀಶರ ನಿಸ್ವಾರ್ಥ ಸೇವೆ: ಶಾಸಕ ಎಂ.ಎಸ್.ಸೋಮಲಿಂಗಪ್ಪ ಆಶಯ

25112022 siraguppa bulding construction
Published on

ಸಿರಗುಪ್ಪ: ಇಲ್ಲಿನ ಮಠಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುತ್ತಿದ್ದು, ಜನ ಸಾಮಾನ್ಯರಿಗೆ ಮಾರ್ಗದರ್ಶನ ನೀಡುವ ಕೆಲಸಗಳನ್ನು ಮಾಡುತ್ತಿವೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.

ನಗರದಲ್ಲಿ ಕೃಷ್ಣಾ ನಗರದಲ್ಲಿ ಗುರುಬಸವ ಮಠದ ಬಳಿ ಒಂದು ಕೋಟಿ ರೂ. ವೆಚ್ಚದಲ್ಲಿ ಬಸವ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಮಠಮಾನ್ಯಗಳಿಗೂ ಆದ್ಯತೆ ನೀಡಿದೆ. ಇಲ್ಲಿನ ಗುರುಬಸವ ಮಠದ ನಿರ್ಮಾಣಕ್ಕೆ ಮುಖ್ಯಮಂತ್ರಿ ಒಂದು ಕೋಟಿ ರೂ. ಮಂಜೂರು ಮಾಡಿದ್ದು, ಸರ್ಕಾರದ ಅನುದಾನದೊಂದಿಗೆ ಭಕ್ತರು ಕೂಡ ಮಠಕ್ಕೆ ದೇಣಿಗೆ ನೀಡಬೇಕು.ಮಠಾಧೀಶರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾರ್ಗದರ್ಶನವಾಗಲಿ. ಮಠ ಮಾನ್ಯಗಳು ನಮಗೆ ಬದುಕುವ ಮಾರ್ಗವನ್ನು ತಿಳಿಸಿಕೊಡಬೇಕು ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಮಹಾಂತಶ್ರೀ, ಹಳೇಕೋಟೆ ಬಳಗನೂರು ಮರಿಶಿವಯೋಗಿಗಳ ಮಠದ ಪೀಠಾಧಿಪತಿ ಸಿದ್ದಬಸವಶ್ರೀ, ಗುರುಬಸವ ಮಠದ ಬಸವಭೂಷಣ ಸ್ವಾಮಿ, ಮುಖಂಡರಾದ ಧರಪ್ಪನಾಯಕ, ನಾಗನಗೌಡ, ಬಸವಲಿಂಗಪ್ಪ, ಗಾದಿಲಿಂಗನಗೌಡ, ವೈ.ಮೃತ್ಯುಂಜಯ, ಮಲ್ಲಿಕಾರ್ಜುನಗೌಡ, ಎನ್.ಜಿ.ಲಿಂಗಣ್ಣ, ನಾಗರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net