

ಸಿರಗುಪ್ಪ: ದೇಶನೂರು ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ ನೂತನ ದೇವಸ್ಥಾನದಲ್ಲಿ ಆ.29ರಂದು ಮಾರೆಮ್ಮದೇವಿ ಹಾಗೂ ಸುಂಕ್ಲಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.
ಹೀಗಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾನುವಾರ ಸಮಸ್ತ ಭಕ್ತರಿಂದ ಕುಂಭ ಕಳಸ, ಸಕಲ ಮಂಗಳ ವಾದ್ಯಗಳೊಂದಿಗೆ ಮೂರ್ತಿಗಳ ಅದ್ದೂರಿ ಮೆರವಣಿಗೆ ನಡೆಯಿತು. ಸೋಮವಾರ ಲೋಕಾಕಲ್ಯಾಣಾರ್ಥ ಹೋಮ ಹವನಗಳು ನಡೆದವು.
ಇದನ್ನೂ ಓದಿ: ಕರಿದೇವರ ಕಂಚಿನ ಮೂರ್ತಿ ಮೆರವಣಿಗೆ
ಮಂಗಳವಾರ ಬೆಳಗ್ಗೆ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ ಎಂದು ಗ್ರಾಮದ ಮುಖಂಡ ರಾಘವೇಂದ್ರರೆಡ್ಡಿ ತಿಳಿಸಿದರು.