ಕೊರ್ರಮ್ಮದೇವಿ ಆರಾಧನೆ ಸಂಪನ್ನ

09102022 siraguppa korramma devi festival
Published on

ಸಿರಗುಪ್ಪ: ನಗರದ 21ನೇವಾರ್ಡ್‌ನಲ್ಲಿರುವ ಕೊರ‌್ರಮ್ಮ ದೇವಿಯ ಆರಾಧನಾ ಮಹೋತ್ಸವ ಸೀಗೆಹುಣ್ಣಿಮೆ ಅಂಗವಾಗಿ ಭಾನುವಾರ ನಡೆಯಿತು. ಕೊರ‌್ರಮ್ಮದೇವಿಗೆ ಮಹಾರುದ್ರಾಭಿಷೇಕ, ಗಣಪತಿ ಹೋಮ, ನವಗ್ರಹ ಶಾಂತಿ ಹೋಮ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆದವು. ತುಂಗಭದ್ರಾ ನದಿಯಿಂದ ತಾಯಿಯ ತನುಬಿಂದಿಗೆಯನ್ನು ಸಕಲ ಮಂಗಳವಾದ್ಯ, ಡೊಳ್ಳು, ಕಳಸ-ಕನ್ನಡಿ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ತಾಯಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net