

ಸಿರಗುಪ್ಪ: ನದಿಗೆ ಬಾಗಿನ ಅರ್ಪಿಸುವುದರಿಂದ ಬೆಳೆಗಳು ಸಮೃದ್ಧವಾಗಿ, ರೈತರ ಜೀವನ ಹಸನಾಗುತ್ತದೆ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ಕೆಂಚನಗುಡ್ಡ ಗ್ರಾಮದ ಹತ್ತಿರ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿ ಬುಧವಾರ ಮಾತನಾಡಿದರು. ನದಿಯನ್ನು ಪೂಜಿಸುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಇದರಿಂದ ನದಿ ಮತ್ತು ಅದರ ಸುತ್ತ್ತಲಿನ ಪರಿಸರವನ್ನು ಸಂರಕ್ಷಿಸಲು ಸಹಾಯವಾಗುತ್ತದೆ. ರೈತರ ಬೆಳೆ ಫಲವತ್ತತೆಯಿಂದ ಬರಲಿ ಎಂದು ಪ್ರಾರ್ಥಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ನಗರಸಭೆ ಸದಸ್ಯರಾದ ಮೋಹನ್ ರೆಡ್ಡಿ, ಮೇಕೆಲ್ ವೀರೇಶ್, ನಟರಾಜ್, ನಟರಾಜ್, ಯುವ ಮೋರ್ಚಾ ಮಂಡಲ ಅಧ್ಯಕ್ಷ ಶೇಖರಗೌಡ, ಪ್ರಮುಖರಾದ ಇಬ್ರಾಹಿಂಪುರ ವೀರನಗೌಡ, ವೀರಭದ್ರಗೌಡ, ಚಿರಂಜೀವಿ ರೆಡ್ಡಿ, ನಾಗೇಶಪ್ಪ, ಮಹದೇವ ಹೊನ್ನಪ್ಪ, ರಾಮರಾಜ, ಗಂಗಣ್ಣ, ರವಿ ಗೌಡ, ಮಂಜು, ಶರಣಬಸನಗೌಡ, ಸಿರಿಗೆರೆ ವಿರೂಪಾಕ್ಷಪ್ಪ ಇತರರಿದ್ದರು.