ಹೆದ್ದಾರಿಗಳ ಅಭಿವೃದ್ಧಿಗೆ ಮೋದಿ ಆದ್ಯತೆ

120722 Siraguppa 16 km. Land worship for road development
ಸಿರಗುಪ್ಪದ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ 150ಎ ಅಭಿವೃದ್ದಿ ಕಾಮಗಾರಿಗೆ ಸಂಸದ ಕರಡಿ ಸಂಗಣ್ಣ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
Published on

ಸಿರಗುಪ್ಪ: ಹೆದ್ದಾರಿ ಅಭಿವೃದ್ಧಿಯಿಂದ ಸಂಚಾರಕ್ಕೆ ಅನುಕೂಲವಾಗುವ ಮತ್ತು ವ್ಯಾಪಾರ-ವಹಿವಾಟಿಗೆ ಅನುಕೂಲವಾಗಲಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಕೊಟ್ಯಾಂತರ ರೂ. ಅನುದಾನ ನೀಡುತ್ತಿದ್ದಾರೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಹೇಳಿದರು.

ನಗರದ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 118.93ಕೋಟಿ ರೂ. ವೆಚ್ಚದಲ್ಲಿ 16 ಕಿ.ಮೀ. ಉದ್ದದ ತೆಕ್ಕಲಕೋಟೆ ಶ್ರೀ ಮಾರೆಮ್ಮ ದೇವಸ್ಥಾನದಿಂದ ಇಂಬ್ರಾಂಪುರ ಗ್ರಾಮದ ಶ್ರೀ ಮಾರೆಮ್ಮ ದೇವಸ್ಥಾನವರಗೆ ರಾಷ್ಟ್ರೀಯ ಹೆದ್ದಾರಿ 150ಎ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.

ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, 2021-22ನೇ ಸಾಲಿನ ರಾಷ್ಟ್ರೀಯ ಹೆದ್ದಾರಿ ವಲಯ 5054ರ ಆರ್ ಮತ್ತು ಬಿ ಅಡಿ ಮಂಜೂರಾದ ಎನ್‌ಎಚ್ 150ಎ ರಸ್ತೆ ಅಭಿವೃದ್ಧಿ ಕಾಮಗಾರಿ ಅತಿ ಶೀಘ್ರವಾಗಿ ನಡೆಸಲಾಗುತ್ತಿದೆ. ರಸ್ತೆ ಬದಿ ಇರುವ ಕಟ್ಟಡಗಳ ಮಾಲೀಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಇರುವ ರಸ್ತೆಯಲ್ಲಿ ಅಕ್ಕ-ಪಕ್ಕದಲ್ಲಿ ಎರಡು ಬದಿ 3 ಅಡಿ ತೆರವುಗೊಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಬೈಪಾಸ್ ರಸ್ತೆ ಅಥವಾ ಫ್ಲೈ ಓವರ್ ಬ್ರಿಡ್ಜ್ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ವೈ.ಸತೀಶ ಮಾತನಾಡಿದರು. ಪ್ರಮುಖರಾದ ಎಚ್.ಬಿ.ಗಂಗಪ್ಪ, ಪಂಪನಗೌಡ, ಚಾಗಿ ಸುಬ್ಬಯ್ಯ, ವಿಕ್ರಮ, ನಟರಾಜ, ಮಂಜುನಾಥ, ಮುರುಳಿಮೋಹನ, ಮಲ್ಲಿಕಾರ್ಜುನ, ಮಹಾದೇವಪ್ಪ, ಕೊಡ್ಲೆ ಮಲ್ಲಿಕಾರ್ಜುನ, ಶಿವಪ್ಪ, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net