ಉನ್ನತ ಸ್ಥಾನಕ್ಕೇರಲು ಕಠಿಣ ಪರಿಶ್ರಮ ಮುಖ್ಯ; ಶಾಸಕ ಎಂ.ಎಸ್.ಸೋಮಲಿಂಗಪ್ಪ ಅಭಿಮತ

27082022 Siraguppa news MLA Somalingappa
Published on

ಸಿರಗುಪ್ಪ:ಪ್ರತಿ ವಿದ್ಯಾರ್ಥಿ, ವ್ಯಕ್ತಿಗಳು ಉನ್ನತ ಸ್ಥಾನಕ್ಕೇರಲು ಕಠಿಣ ಪರಿಶ್ರಮ ಮುಖ್ಯ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ತೆಕ್ಕಲಕೋಟೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಶನಿವಾರ ಆಯೋಜಿಸಿದ್ದ ಒಂದು ದಿನದ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅನೇಕ ಮಹನೀಯರು ತಾವು ಪಟ್ಟ ಶ್ರಮದಿಂದಲೇ ಉನ್ನತ ವ್ಯಕ್ತಿಗಳಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಸರ್ಕಾರಿ ಶಾಲೆಗಳಲ್ಲಿ ನುರಿತ ಅನುಭವವುಳ್ಳ ಶಿಕ್ಷಕರಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ವ್ಯಕ್ತಿಗಳಾಗಿ. ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳಿದ್ದು, ಸದುಪಯೋಪಡಿಸಿಕೊಳ್ಳಿ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಪಿ.ಎಲ್.ರಾವ್, ಎಸ್.ಕೆ.ಭಾಗ್ಯಲಕ್ಷ್ಮೀ, ಶಿಕ್ಷಕರಾದ ಎಚ್.ಹುಲುಗಪ್ಪ, ಅಮೃತಂ, ಲಕ್ಷ್ಮೀದೇವಿ, ರಾಧ, ಆಜಾದ್, ಏಸುಬಾಬು, ಸುನೀಲ್‌ಕುಮಾರ್ ಮುಖಂಡರಾದ ಅಮರಸಿದ್ದ ಕಟ್ಟಿಮನಿ, ಜಿ.ಸಿದ್ದಪ್ಪ, ಯು.ವೆಂಕೋಬ ಹಾಗೂ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net