ಆರೋಗ್ಯ ತಪಾಸಣೆ ಶಿಬಿರ ಅಗತ್ಯ- ಸಿರಗುಪ್ಪ ಬಿಇಒ ಗುರಪ್ಪ ಅಭಿಮತ

020123 Siraguppa Free Health Checkup camp
ಸಿರಗುಪ್ಪ ನಗರದ ಹೈಸ್ಕೂಲ್ ಆವರಣದಲ್ಲಿರುವ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಸಮಗ್ರ ಶಿಕ್ಷಣ ಅಭಿಯಾನದಡಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮೌಲ್ಯಾಂಕನ ಶಿಬಿರವನ್ನು ಬಿಇಒ ಗುರಪ್ಪ ಉದ್ಘಾಟಿಸಿದರು.
Published on

ಸಿರಗುಪ್ಪ: ತಾಲೂಕಿನ ವಿದ್ಯಾರ್ಥಿಗಳು ಆರೋಗ್ಯವಾಗಿರಲಿ ಎನ್ನುವ ದೃಷ್ಟಿಯಿಂದ ಸಮಗ್ರ ಶಿಕ್ಷಣ ಅಭಿಯಾನದಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಬಿಇಒ ಗುರಪ್ಪ ಹೇಳಿದರು.

ನಗರದ ಹೈಸ್ಕೂಲ್ ಆವರಣದಲ್ಲಿರುವ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಸಮಗ್ರ ಶಿಕ್ಷಣ ಅಭಿಯಾನದಡಿ ಸೋಮವಾರ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮೌಲ್ಯಾಂಕನ ಶಿಬಿರದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಆರೋಗ್ಯಕರ ಬೆಳವಣಿಗೆಗೆ ಇಂತಹ ಶಿಬಿರಗಳು ಅವಶ್ಯ. ಇದರಿಂದ ಅನಾರೋಗ್ಯಕ್ಕೆ ತುತ್ತಾದ ಮಕ್ಕಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ತಪ್ಪನಗೌಡಪಾಟೀಲ್, ವೈದ್ಯರಾದ ಜ್ಯೋತಿಮನೋಜ್, ವಸುದೇಂದ್ರರಾವ್, ಸಿ.ಸುಭಾಷ್, ಶಿಕ್ಷಕರಾದ ಲೋಕೇಶರೆಡ್ಡಿ, ಶಿಕ್ಷಕರಾದ ಶ್ರೀಧರ, ಹನುಮಂತಪ್ಪ, ಮಾರುತಿ, ಮಲ್ಲಿಕಾರ್ಜುನ, ಛಾಯಾದೇವಿ, ಕಾಳಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net