ಮೀನುಗಾರರು ಆರ್ಥಿಕವಾಗಿ ಸಬಲರಾಗಲಿ- ಸಿರಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಲಹೆ

120123 Siraguppa Distribution of fishing equipment
ಸಿರಗುಪ್ಪ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40 ಮೀನುಗಾರ ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.
Published on

ಸಿರಗುಪ್ಪ: ತಾಲೂಕಿನ ಸುತ್ತಲೂ ತುಂಗಭದ್ರಾ, ವೇದಾವತಿ, ಹಗರಿ ನದಿಗಳು ಹರಿಯುತ್ತಿದ್ದು, ಮೀನುಗಾರಿಕೆ ಮಾಡಲು ಸಾಕಷ್ಟು ಅವಕಾಶವಿದೆ. ಸರ್ಕಾರವೂ ಮೀನುಗಾರರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಲಹೆ ನೀಡಿದರು.

ನಗರದ ತಾಪಂ ಸಭಾಂಗಣದಲ್ಲಿ ಜಿಪಂ ಬಳ್ಳಾರಿ, ಮಿನುಗಾರಿಕೆ ಇಲಾಖೆ ಬಳ್ಳಾರಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕಿನ ಮೀನುಗಾರಿಕೆಯ 40 ಫಲಾನುಭವಿಗಳಿಗೆ ಸಲಕರಣೆ ವಿತರಣೆ ಮಾಡಿ ಮಾತನಾಡಿದರು. ತುಂಗಭದ್ರಾ ನದಿಯಲ್ಲಿ ಅನೇಕ ರೀತಿಯ ವೈವಿದ್ಯಮಯ ಮೀನುಗಳಿದ್ದು, ತಿನ್ನಲು ರುಚಿಯಾಗಿರುತ್ತವೆ. ಆದ್ದರಿಂದ ಮೀನುಗಾರರು ನದಿಯಲ್ಲಿ ಮೀನನ್ನು ಹಿಡಿದು ಅನೇಕ ವರ್ಷಗಳಿಂದ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮೀನುಗಾರರಿಗೆ ಬಲೆ, ತಕ್ಕಡಿ, ಮೀನುಗಳ ಶೇಖರಣೆ ಡಬ್ಬಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ತಾಲೂಕಿನ ಮೀನುಗಾರರಿಗೆ ವಿವಿಧ ವಸತಿ ಯೋಜನೆಯಡಿ 30 ಮನೆಗಳನ್ನು ಮಂಜೂರು ಮಾಡುವ ಗುರಿಯಿದೆ. ಅರ್ಹರು ವಸತಿ ಯೋಜನೆಯಡಿ ಸೂಕ್ತ ದಾಖಲೆಯೊಂದಿಗೆ ಇಲಾಖೆಗೆ ಅರ್ಜಿಸಲ್ಲಿಸಬೇಕು ಎಂದರು. ತಾಪಂ ಇಒ ಎಂ.ಬಸಪ್ಪ ಮತ್ತು ತಾಲೂಕಿನ ವಿವಿಧ ಗ್ರಾಮಗಳ ಮೀನುಗಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net