ದುಶ್ಚಟ ನಿಲ್ಲಿಸಿ, ಧರ್ಮಕ್ಕೆ ಹಣ ವಿನಿಯೋಗಿಸಿ

Siraguppa Kanaka Bhavana Bhoomi pooj function
ಸಿರಗುಪ್ಪದಲ್ಲಿ ತಾಲೂಕು ಕುರುಬರ ಸಂಘ ನಿರ್ಮಾಣ ಮಾಡುತ್ತಿರುವ ಕನಕ ಭವನದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಕಾಗಿನೆಲೆ ಕನಕ ಗುರುಪೀಠ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ, ತಿಂಥಣಿ ಬ್ರಿಜ್‌ನ ಕನಕ ಗುರುಪೀಠ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀಸಿದ್ದರಾಮಾನಂದ ಮಹಾಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.
Published on

ಸಿರಗುಪ್ಪ: ಸಮಾಜದ ಪ್ರತಿಯೊಬ್ಬರೂ ದುಶ್ಚಟಕ್ಕೆ ಮಾಡುವ ವೆಚ್ಚವನ್ನು ನಿಲ್ಲಿಸಿ, ಆ ಹಣವನ್ನು ಧರ್ಮದ ಕಾರ್ಯಕ್ಕೆ ಬಳಸಿ ಎಂದು ಕಾಗಿನೆಲೆ ಕನಕ ಗುರುಪೀಠ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಹೇಳಿದರು.

ನಗರದ ಶ್ರೀಸಾಯಿಬಾಬಾ ದೇವಸ್ಥಾನದ ಹತ್ತಿರ ತಾಲೂಕು ಕುರುಬರ ಸಂಘ ನಿರ್ಮಾಣ ಮಾಡುತ್ತಿರುವ ಕನಕ ಭವನಕ್ಕೆ ತಿಂಥಣಿ ಬ್ರಿಜ್‌ನ ಕನಕ ಗುರುಪೀಠ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ ಜತೆ ಸೇರಿ ಭಾನುವಾರ ಭೂಮಿ ಪೂಜೆ ನೆರವೇರಿಸಿ, ಆಶೀರ್ವಚನ ನೀಡಿ, ಸಮುದಾಯ ಎಲ್ಲರೂ ಕನಕ ಭನವಕ್ಕೆ ದೇಣೀಗೆ ನೀಡಿದರೆ ಸರ್ಕಾರದ ನೆರವು ಪಡೆಯುವ ಅಗತ್ಯ ಇರುವುದಿಲ್ಲ. ಧರ್ಮಕ್ಕೆ ಎಲ್ಲರೂ ಶಿರಬಾಗಿ ನಡೆಯಬೇಕು. ಧರ್ಮದಿಂದಲೇ ನಾವು ನೀವು ಇರುವುದು. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಮಕ್ಕಳು ವಿದ್ಯಾವಂತರಾಗಬೇಕು. ಇದರಿಂದ ಧರ್ಮದ ಕಾರ್ಯ ಯಶಸ್ವಿಯಾಗುತ್ತದೆ ಎಂದರು.

ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ಬಿಜೆಪಿ ಸರ್ಕಾರವು ಹಿಂದುಳಿದ ವರ್ಗಗಳಿಗಾಗಿ ಶ್ರಮಿಸುತ್ತಿದೆ. ಹಿಂದುಳಿದ ವರ್ಗಗಳ ಅಭಿವೃದ್ದಿಯೇ ನಿಜವಾದ ಅಭಿವೃದ್ದಿ ಎಂದರು. ತಿಂಥಣಿ ಬ್ರಿಜ್‌ನ ಕನಕ ಗುರುಪೀಠ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ, ನಗರಾಭಿವೃದ್ದಿ ಸಚಿವ ಬಿ.ಎ.ಬಸವರಾಜ್ ಬೈರಾತಿ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಎಚ್.ಎಂ.ರೇವಣ್ಣ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಬಿ.ಎಂ.ನಾಗರಾಜ, ಎಎಪಿ ಕಾರ್ಯಕರ್ತ ಧರಪ್ಪ ನಾಯಕ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಸುಶೀಲಮ್ಮ ವೆಂಕರಾಮರೆಡ್ಡಿ, ಮುಖಂಡರಾದ ಧರ್ಮಣ್ಣ ದೊಡ್ಡಮನಿ, ದಮ್ಮೂರು ಶಂಕರಪ್ಪ, ಎರೆಗೌಡ, ಮುರುಳಿಕೃಷ್ಣ, ಕೆ.ಎ.ರಾಮಲಿಂಗಪ್ಪ, ಅಯ್ಯಳಿ ತಿಮ್ಮಪ್ಪ, ಶಶಿಕಲಾ, ದಮ್ಮೂರು ಸೋಮಪ್ಪ, ಎನ್.ಕರಿಬಸಪ್ಪ, ನಾಗೇಶಪ್ಪ, ಪ್ಯಾಟಪ್ಪ, ಬಾಗೆವಾಡಿ ಭೀಮಣ್ಣ, ಆರ್.ಶರಣಬಸವ, ಶಂಕ್ರಪ್ಪ, ಎಚ್.ಕೆ.ಪಕ್ಕೀರಪ್ಪ, ಹೊಸೂರಪ್ಪ, ರಾಘವೇಂದ್ರ, ವಿರೂಪಾಕ್ಷಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net